ADVERTISEMENT

ತುಂಬಿ ಹರಿಯುತ್ತಿದೆ ತುಂಗಭದ್ರಾ ನದಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 15:56 IST
Last Updated 25 ಜುಲೈ 2023, 15:56 IST
ಹೊನ್ನಾಳಿ ಪಟ್ಟಣದಲ್ಲಿ ಹಾದು ಹೋಗಿರುವ ತುಂಗಭದ್ರಾ ನದಿ ನೋಟ ಚಿತ್ರ: ಎನ್‌.ಕೆ. ಆಂಜನೇಯ
ಹೊನ್ನಾಳಿ ಪಟ್ಟಣದಲ್ಲಿ ಹಾದು ಹೋಗಿರುವ ತುಂಗಭದ್ರಾ ನದಿ ನೋಟ ಚಿತ್ರ: ಎನ್‌.ಕೆ. ಆಂಜನೇಯ   

ಹೊನ್ನಾಳಿ: ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಪಟ್ಟಣದಲ್ಲಿ ಹಾದುಹೋಗಿರುವ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಮಂಗಳವಾರ 9.85 ಮೀಟರ್‌ಗೆ ಏರಿಕೆ ಕಂಡಿದೆ.

ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಕಮಲಮ್ಮ ಬಸವರಾಜಪ್ಪ ಅವರ ಮನೆ ಹಾಗೂ ಬುಳ್ಳಾಪುರದಲ್ಲಿ ನರಸಿಂಹಪ್ಪ ರಂಗಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲ್ಲೂಕಿನಲ್ಲಿರುವ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದರೆ ಅಂತಹ ಶಾಲೆಗಳಿಗೆ ಮಾತ್ರ ರಜೆ ಘೋಷಿಸುವಂತೆ ಬಿಇಒಗೆ ಹಾಗೂ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ತಿಳಿಸಿದ್ದಾರೆ.

ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ: ಪಟ್ಟಣದ ಬಾಲರಾಜ್ ಘಾಟ್‌ಗೆ ನೀರು ನುಗ್ಗುವ ಸಂಭವ ಇರುವುದರಿಂದ ಎಚ್ಚರದಿಂದ ಇರುವಂತೆ ಜನರಿಗೆ ತಹಶೀಲ್ದಾರ್ ಅವರು ಸೂಚನೆ ನೀಡಿದರು.

ADVERTISEMENT

ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ಕಾಳಜಿ ಕೇಂದ್ರ ತೆರೆಯಲು ಅಂಬೇಡ್ಕರ್ ಭವನದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜಸ್ವ ನಿರೀಕ್ಷಕರಾದ ಜಯಪ್ರಕಾಶ್ ಮತ್ತು ಗುರುಪ್ರಸಾದ್, ಮಹೇಂದ್ರಕುಮಾರ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಹೊನ್ನಾಳಿ ಪಟ್ಟಣದ ಮುಳುಗಡೆ ಪ್ರದೇಶ ಬಾಲರಾಜ್ ಘಾಟ್‌ಗೆ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.