ಕಡತ
(ಸಾಂದರ್ಭಿಕ ಚಿತ್ರ)
ದಾವಣಗೆರೆ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ‘ವಿಶಿಷ್ಟ ಮನೆ ಸಂಖ್ಯೆ’ (ಯುಎಚ್‌ಐಡಿ) ಆಧರಿಸಿ ಪತ್ತೆಯೇ ಸವಾಲಾಗಿದೆ. ‘ಜಿಯೊ ಟ್ಯಾಗಿಂಗ್’ ಆದ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ, ಮನೆಗಳ ನಡುವೆ ಸಾಮ್ಯತೆ ಕಾಣದೇ ಸಮೀಕ್ಷಕರು ಪರದಾಡುತ್ತಿದ್ದಾರೆ.
ಸಮೀಕ್ಷೆಗೂ ಮುನ್ನ ‘ವಿಶಿಷ್ಟ ಮನೆ ಸಂಖ್ಯೆ’ (ಯುಎಚ್‌ಐಡಿ) ಸೃಜಿಸಿ ಚೀಟಿ ಅಂಟಿಸುವ ಕಾರ್ಯ ಪೂರ್ಣಗೊಳಿಸಲಾಗಿತ್ತು. ಇದನ್ನು ಆಧರಿಸಿ ಸಮೀಕ್ಷಕರಿಗೆ 150 ಮನೆಗಳ ಬ್ಲಾಕ್ ರೂಪಿಸಲಾಗಿತ್ತು. ಸಮೀಕ್ಷಕರಿಗೆ ಮನೆಗಳಿರುವ ಸ್ಥಳಗಳು ಬೇರೆಡೆ ತೋರಿಸಿವೆ.
‘ಯುಎಚ್‌ಐಡಿ ಪತ್ತೆಗೆ ಪ್ರತ್ಯೇಕ ಆ್ಯಪ್ ಬಳಸಲಾಗುತ್ತಿದೆ. ನಿಗದಿತ ಬ್ಲಾಕ್‌ಗೆ ತೆರಳಿ ಯುಎಚ್‌ಐಡಿ ನೀಡಿದರೆ ಅದರ ಸ್ಥಳ ಮತ್ತೊಂದು ಬಡಾವಣೆ ಅಥವಾ ಹಳ್ಳಿಯಲ್ಲಿ ತೋರಿಸುತ್ತಿದೆ’ ಎಂದು ಸಮೀಕ್ಷಕರೊಬ್ಬರು ‘ಪ್ರಜಾವಾಣಿ’ಗೆ ಸಮಸ್ಯೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.