ಕಡರನಾಯ್ಕನಹಳ್ಳಿ: ಅಮಾವಾಸ್ಯೆ ಅಂಗವಾಗಿ ಸಮೀಪದ ಉಕ್ಕಡಗಾತ್ರಿಯಲ್ಲಿ ಭಾನುವಾರ ಭಕ್ತರ ದಂಡು ಇತ್ತು. ಅಜ್ಜಯ್ಯನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಭಕ್ತರು ಸ್ನಾನ ಘಟ್ಟದಲ್ಲಿ ಸ್ನಾನ ಮುಗಿಸಿ ದಿಂಡುರುಳು ಸಲ್ಲಿಸಿದರು. ಕಳಸ ಹೂಡಿ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿದರು. ವಿವಿಧ ರೀತಿಯಲ್ಲಿ ಹರಕೆ ತೀರಿಸುತ್ತಿರುವುದು ಕಂಡುಬಂತು.
ನಂತರ ನದಿ ದಂಡೆಯ ವಿಜ್ಞಾನೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದರು. ವಾಹನಗಳನ್ನು ತುಂಗಭದ್ರಾ ನದಿಯಲ್ಲಿ ತೊಳೆದು ಪೂಜೆ ಮಾಡಿಸಿದರು.
ಅಮಾವಾಸ್ಯೆ ಪ್ರಯುಕ್ತ ಅಜ್ಜಯ್ಯನಿಗೆ ವಿಶೇಷ ಅಭಿಷೇಕ, ಅಲಂಕಾರಗಳು ನಡೆದವು. ಫಳಾರ ಮತ್ತು ಹಣ್ಣು, ಕಾಯಿ ವ್ಯಾಪಾರ ಜೋರಾಗಿತ್ತು. ಶನಿವಾರ ರಾತ್ರಿ ಭಕ್ತರು ಭಜನೆ ನಡೆಸಿದರು.
ದೇವಸ್ಥಾನದ ಟ್ರಸ್ಟ್ ವತಿಯಿಂದ ಭಕ್ತರಿಗೆ ವಸತಿ ಮತ್ತು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.