ADVERTISEMENT

ದಾವಣಗೆರೆ: 18 ವರ್ಷದ ಮೇಲಿನವರಿಗೆ ಬಂತು ಲಸಿಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 5:47 IST
Last Updated 11 ಮೇ 2021, 5:47 IST
ದಾವಣಗೆರೆಯ ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಂಭಾಗದಲ್ಲಿ ಲಸಿಕೆಗಾಗಿ ಟೋಕನ್ ಪಡೆಯಲು ಮುಗಿಬಿದ್ದಿರುವ ನೂರಾರು ಜನ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಂಭಾಗದಲ್ಲಿ ಲಸಿಕೆಗಾಗಿ ಟೋಕನ್ ಪಡೆಯಲು ಮುಗಿಬಿದ್ದಿರುವ ನೂರಾರು ಜನ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: 18 ವರ್ಷದ ಮೇಲಿನವರಿಗೆ ನೀಡಲು ಲಸಿಕೆ ಸೋಮವಾರ ಜಿಲ್ಲೆಗೆ ಪೂರೈಕೆಯಾಗಿದೆ. ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿದವರಿಗೆ ಮಾತ್ರ ಮೇ 11ರಿಂದ ಲಸಿಕೆ ನೀಡುವ ಕಾರ್ಯ ನಡೆಯಲಿದೆ.

ನೋಂದಣಿ ಮಾಡಿಕೊಂಡಿರುವ 14ರಿಂದ 44 ವರ್ಷದವರು ಚಿಗಟೇರಿ ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು.

ಪ್ರತಿ ಕೇಂದ್ರದಲ್ಲಿ 150 ಫಲಾನುಭವಿಗಳಿಗೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

18 ವರ್ಷದ ಮೇಲಿನವರಿಗೆ ನೀಡಲು ಒಟ್ಟು 6,500 ಲಸಿಕೆಗಳು, 45 ವರ್ಷದ ಮೇಲಿನ ಎರಡನೇ ಡೋಸ್‌ ಪಡೆಯುವವರಿಗಾಗಿ 5,000 ಡೋಸ್‌ ಬಂದಿದೆ.

ಜಿಲ್ಲೆಯಲ್ಲಿ ಸೋಮವಾರವೂ ಎರಡನೇ ಡೋಸ್‌ಗಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಟೋಕನ್‌ ಪಡೆಯಲು ಮುಗಿಬಿದ್ದಿದ್ದರು. ಚಿಗಟೇರಿ ಆಸ್ಪತ್ರೆ, ನಿಟುವಳ್ಳಿ ನಗರ ಆರೋಗ್ಯ ಕೇಂದ್ರ ಸಹಿತ ಹಲವೆಡೆ ಪೊಲೀಸರು ಬಂದು ಜನರನ್ನು ನಿಯಂತ್ರಿಸಬೇಕಾಯಿತು.

ಲಸಿಕೆ ಹಾಕಿಸಿಕೊಂಡವರು: ಸೋಮವಾರ ಒಟ್ಟು 3,275 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರಲ್ಲಿ 21 ಮಂದಿ ಮೊದಲ ಡೋಸ್‌, 13 ಮಂದಿ ಎರಡನೇ ಡೋಸ್‌, ಮುಂಚೂಣಿ ಕಾರ್ಯಕರ್ತರಲ್ಲಿ 21 ಮಂದಿ ಮೊದಲ ಡೋಸ್‌, 46 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

45 ವರ್ಷ ದಾಟಿದವರಲ್ಲಿ 284 ಮಂದಿ ಮೊದಲ ಡೋಸ್‌, 2,890 ಮಂದಿ ದ್ವಿತೀಯ ಡೋಸ್‌ ಹಾಕಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಒಟ್ಟು 2,22,853 ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.