ADVERTISEMENT

ಮಾಯಕೊಂಡ | ಸರ್ವಜನಾಂಗದ ವಾಲ್ಮೀಕಿ ಮಹರ್ಷಿ: ಐಗೂರು ಹನುಮಂತಪ್ಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:50 IST
Last Updated 13 ಅಕ್ಟೋಬರ್ 2025, 5:50 IST
ಮಾಯಕೊಂಡದ ಹಿರೇಮದಕರಿ ನಾಯಕರ ಸಮಾಧಿ ಬಳಿ ನಡೆದ ವಾಲ್ಮೀಕಿ ಜಯಂತಿಯನ್ನು ಕಾಂಗ್ರೆಸ್ ಎಸ್.ಟಿ ಮೋರ್ಚ ರಾಜ್ಯ ಘಟಕದ ಉಪಾಧ್ಯಕ್ಷ ಐಗೂರು ಹನುಮಂತಪ್ಪ ಉದ್ಘಾಟಿಸಿದರು
ಮಾಯಕೊಂಡದ ಹಿರೇಮದಕರಿ ನಾಯಕರ ಸಮಾಧಿ ಬಳಿ ನಡೆದ ವಾಲ್ಮೀಕಿ ಜಯಂತಿಯನ್ನು ಕಾಂಗ್ರೆಸ್ ಎಸ್.ಟಿ ಮೋರ್ಚ ರಾಜ್ಯ ಘಟಕದ ಉಪಾಧ್ಯಕ್ಷ ಐಗೂರು ಹನುಮಂತಪ್ಪ ಉದ್ಘಾಟಿಸಿದರು   

ಮಾಯಕೊಂಡ: ಇತಿಹಾಸ ಪುರುಷ ಹಿರೇಮದಕರಿ ನಾಯಕರ ಪುಣ್ಯ ಭೂಮಿ ಮಾಯಕೊಂಡ. ಇಲ್ಲಿ ನಾಡು ನುಡಿಗಾಗಿ ಹೋರಾಡಿದವರ ಇತಿಹಾಸ ಇದ್ದು, ಆ ಪರಂಪರೆ ಮುಂದುವರೆಯಬೇಕಿದೆ ಎಂದು ಕಾಂಗ್ರೆಸ್ ಎಸ್.ಟಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಐಗೂರು ಹನುಮಂತಪ್ಪ ತಿಳಿಸಿದರು.

ಇಲ್ಲಿನ ಹಿರೇಮದಕರಿ ನಾಯಕರ ಸಮಾಧಿ ಬಳಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿಯವರನ್ನು ನಾಯಕ ಜನಾಂಗಕ್ಕೆ ಸೀಮಿತವಾಗಿಸಬಾರದು. ರಾಮರಾಜ್ಯದ ಕಲ್ಪನೆಯನ್ನು ರಾಮಾಯಣದ ಮೂಲಕ ನೀಡಿ ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಸಮಾಧಿ ಸ್ಥಳವನ್ನ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಇದೆ. ಟಿಎಸ್‌ಪಿ ಇಲಾಖೆಗೆ ಜಾಗವನ್ನ ವರ್ಗಾಯಿಸಿದರೆ, ಹೆಚ್ಚು ಅನುದಾನ ತರುವ ಕೆಲಸ ಮಾಡಬಹುದಾಗಿದೆ‌. ನಿಮ್ಮೆಲ್ಲರ ಸಹಕಾರ ಇದ್ದರೆ ಮುಂದಿನ ಜಯಂತಿ ವೇಳೆಗೆ ಒಂದು ರೂಪ ಕೊಡುವ ಕೆಲಸಕ್ಕೆ ಪ್ರಯತ್ನಿಸೋಣ ಎಂದರು.

ADVERTISEMENT

ಗ್ರಾಮದಲ್ಲಿ ಮದಕರಿ ನಾಯಕರ ಸಮಾಧಿ ಸ್ಥಳದಲ್ಲಿ ಎಲ್ಲಾ ಮಹಾನ್ ದಾರ್ಶನಿಕರ ಜಯಂತಿಗಳನ್ನ ಜಾತ್ಯಾತೀತವಾಗಿ ಆಚರಿಸುವ ಗುರಿ ನಮ್ಮೆಲ್ಲರಲ್ಲಿದೆ ಎಂದು ಸುನಿಲ್ .ಜಿ.ಎಲ್ ಹೇಳಿದರು. 

‘ಮಹನೀಯರ ಜಯಂತಿಗಳನ್ನು ಮಾದರಿಯಾಗಿ ಆಚರಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಸಮಾಧಿ ಜೀರ್ಣೋದ್ಧಾರ ಕಾರ್ಯ ಶೀಘ್ರವೇ ಆಗಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಡೂರ್ ರಾಜಶೇಖರ್ ಆಗ್ರಹಿಸಿದರು.

ಕನ್ನಡ ಯುವ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಎಸ್.ಆರ್. ಶರಣಪ್ಪ, ಉಪನ್ಯಾಸಕ ಬಿ.ಆರ್. ಮಹಾಂತೇಶ್, ಎಲ್.ಜೆ. ಉಮಾಶಂಕರ್, ಕೊಡಗನೂರು ಲಕ್ಷ್ಮಣ್, ಕಾರ್ತಿಕ್ ಪಾಳೇಗಾರ, ಎಂ.ಜಿ. ಗುರುನಾಥ್, ಎಂ.ವಿ. ಲಕ್ಷ್ಮಣ್, ಜಿ. ಜಗದೀಶ್, ಹುಚ್ಚವ್ವನಹಳ್ಳಿ ಕಂಬರಾಜ್, ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜಪ್ಪ, ಮುಖಂಡರಾದ ಉಮಾಪತಿ, ದಿಂಡದಹಳ್ಳಿ ಮಂಜುನಾಥ್, ಹಾಲೇಶ್, ಸಿದ್ದೇಶ್, ರವಿ, ಜಯಣ್ಣ,  ತಿಪ್ಪೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.