ದಾವಣಗೆರೆ: ಹೆಚ್ಚು ಮಕ್ಕಳನ್ನು ಹೆರುವುದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇಬ್ಬರು ಮಕ್ಕಳಿಗೆ ಸೀಮಿತವಾಗುವುದು ಸೂಕ್ತ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಪಟಗಿ ಸಲಹೆ ನೀಡಿದರು.
ಇಲ್ಲಿನ ಬಾಷ ನಗರದ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕುಟುಂಬ ಚಿಕ್ಕದಾಗಿ ಇದ್ದಷ್ಟು ಸುಖಿಯಾಗಿರಲು ಸಾಧ್ಯ. ಪ್ರತಿ ಸಮುದಾಯದಲ್ಲಿ ಭಿನ್ನ ಸಂಪ್ರದಾಯಗಳಿವೆ. ಚಿಕ್ಕ ವಯಸ್ಸಿಗೆ ಮದುವೆ ಮಾಡಬಾರದು. ಮದುವೆಯಾದ ಬಳಿಕ ಎರಡು ವರ್ಷ ಮಕ್ಕಳಾಗದಂತೆ ನೋಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ’ ಎಂದು ಹೇಳಿದರು.
ವೈದ್ಯ ಡಾ. ಎನ್.ಎಸ್.ಸುಧೀಂದ್ರ, ವೈದ್ಯಾಧಿಕಾರಿ ಡಾ. ಎನ್.ರೇಖಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಉಮಾಪತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟಾಚಲಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.