ದಾವಣಗೆರೆ: ಮಹಾರಾಷ್ಟ್ರದ ಅಮರಾವತಿಯಲ್ಲಿ ಡಿಸೆಂಬರ್ 4ರಿಂದ 7ರವರೆಗೆ ನಡೆಯುವ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ದಾವಣಗೆರೆಯ ಏಳು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ದಾವಣಗೆರೆಯ ಸಾಯಿ ಜಿಮ್ನ ಎಫ್. ಇಸ್ಮಾಯಿಲ್ (ಸಬ್ ಜೂನಿಯರ್), ಗಣೇಶ್, ಮಂಜುನಾಥ್ (ಜೂನಿಯರ್), ಫಕ್ರುದ್ದೀನ್ ಸಿ. (ಮಾಸ್ಟರ್–2), ಲಕ್ಷ್ಮೀಕಾಂತ್ (ಮಾಸ್ಟರ್–3), ಬೀರೇಶ್ವರ ಶಾಲೆಯ ದಿವ್ಯಾ ಸಿ. (ಜೂನಿಯರ್) ಮತ್ತು ಚಂದ್ರಪ್ಪ (ಮಾಸ್ಟರ್–2) ಅವರು ಚಾಂಪಿಯನ್ಷಿಪ್ಗೆ ತೆರಳಲಿದ್ದಾರೆ.ಫಕ್ರುದ್ದೀನ್ ಸಿ. ಮೂರನೇ ಬಾರಿ ಅಂತರರಾಷ್ಟ್ರೀಯ ಮಟ್ಟದ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ರಾಜ್ಯ ಅಮೆಚೂರ್ ಪವರ್ಲಿಫ್ಟಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಾಯಿನಾಥ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊರೊನಾ ಕಾರಣದಿಂದ ಚಾಂಪಿಯನ್ಷಿಪ್ ಮುಂದೂಡಲಾಗಿತ್ತು. 11 ದೇಶಗಳು ಪ್ರತಿನಿಧಿಸಬೇಕಿತ್ತು. ಈಗ ಆರರಿಂದ ಏಳು ದೇಶಗಳ ಕ್ರೀಡಾಪಟುಗಳು ಮಾತ್ರ ಭಾಗವಹಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.