ಹರಿಹರ: ‘ಆಕಾಶದ ಚಿನ್ನದ ತೊಟ್ಟಿಲಲ್ಲಿ ಕಾಳಿಂಗ ಸರ್ಪ ಮಲಗಿತಲೇ ಎಚ್ಚರ’ ಎಂದು ತಾಲ್ಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿಯ ಕಾರ್ಣಿಕವಾಯಿತು.
ನಗರದ ತುಂಗಭದ್ರಾ ನದಿಯ ದಡದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಾಗಪಂಚಮಿ ನಿಮಿತ್ತ ತಾಲೂಕಿನ ಯಲವಟ್ಟಿ ಗ್ರಾಮದ ಆಂಜನೇಯ ಸ್ವಾಮಿಯ ಕಾರ್ಣಿಕ ನುಡಿಯುವುದು ಪ್ರತಿವರ್ಷದ ಪ್ರತೀತಿಯಾಗಿದೆ.
ಪೂಜಾರಪ್ಪ ಕಾರ್ಣಿಕ ನುಡಿ ನುಡಿಯುತ್ತಿದ್ದಂತೆ ಅಲ್ಲಿದ್ದ ಭಕ್ತರು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದರೆ ಇನ್ನು ಹಲವರು ತಮ್ಮರಿಗೆ ಪೋನ್ ಮಾಡಿ ಕಾರ್ಣಿಕ ಆರ್ಥದ ವಿನಿಯಮ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಹರಿಹರ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಹಲವು ಗ್ರಾಮಗಳ ವಿವಿಧ ದೇವತಾ ಮೂರ್ತಿಗಳು ತುಂಗಭದ್ರ ನದಿಯಲ್ಲಿ ಪೂಜೆ ಸಲ್ಲಿಸಿ ನಂತರ ನದಿಯ ದಡದಲ್ಲಿರುವ ಸಂಗಮೇಶ್ವರ ದೇವಸ್ಥಾನ ಅವರಣದಲ್ಲಿ ಸೇರುತ್ತವೆ.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಕಾರ್ಣಿಕ ಮುಗಿದ ನಂತರ ಗೋವಿಂದಾ, ಗೋವಿಂದಾ ಎನ್ನುತ್ತಾ ಜಯ ಘೋಷ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.