ಕಲಘಟಗಿ: ತಾಲ್ಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಜಿಲ್ಲಾ ಒಂಬುಡ್ಸ್‌ಮನ್ ಅಧಿಕಾರಿ ಮಹಾರುದ್ರಪ್ಪ ಇಚಂಗಿ ಹಾಗೂ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
‘ಗ್ರಾಮದ ತುಂಬಿಕೇರಿ ಹಾಗೂ ಸೂರಪ್ಪನ ಕೆರೆ ಹೂಳೆತ್ತದೆ ಬಿಲ್ ಪಾವತಿ ಮಾಡಿದ್ದಾರೆ. ಉಗ್ಗಿನಕೇರಿ ಹೊಲದಿಂದ ಸಾರ್ವಜನಿಕ ನೀರಗಾಲುವೆ, ಪಕ್ಕೀರಪ್ಪ ಹೊಲದಿಂದ ವಾಲಿ ಹೊಲದವರೆಗೆ ನೀರಗಾಲುವೆ, ಶಿವಳ್ಳಿ ಹೊಲದಿಂದ ಮುಗದ ಹೊಲದವರೆಗೆ ನೀರಗಾಲುವೆ ನಿರ್ಮಿಸದೆ ಹಣ ಪಡೆದುಕೊಂಡಿದ್ದಾರೆ’ ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಮಹಾರುದ್ರಪ್ಪ ಇಚಂಗಿ ಮಾತನಾಡಿ, ‘ತುಂಬಿ ಕೆರೆ ಹಾಗೂ ಸೂರಪ್ಪನ ಕೆರೆಗೆ ಭೇಟಿ ಮಾಹಿತಿ ಪಡೆಯಲಾಗಿದೆ. ಗ್ರಾಮಸ್ಥರ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕ ಸಂತೋಷ ತಳಕಲ್ಲ, ಪಿಡಿಒ ರವಿಕುಮಾರ್ ರಾಠೋಡ, ಎಂಜಿನಿಯರ್ ಅಭಿಷೇಕ ಡೊಂಬರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.