ADVERTISEMENT

ಅಸ ್ಸಾಂ ಎನ್‌ಎಸ್‌ಎಸ್‌ ಶಿಬಿರದಲ್ಲಿ ಕವಿವಿ ತಂಡ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:42 IST
Last Updated 2 ಜನವರಿ 2014, 6:42 IST

ಧಾರವಾಡ: ರಾಷ್ಟ್ರೀಯ ಸೇವಾ ಯೋಜನೆಯ ಮೆಗಾ ಶಿಬಿರವು ಇತ್ತೀಚೆಗೆ ಅಸ್ಸಾಂ ರಾಜ್ಯದ ತೇಜಪುರ್‌ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜರುಗಿತು. ಈ ಶಿಬಿರಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಳಗಾವಿ ಚನ್ನಮ್ಮ ವಿಶ್ವವಿದ್ಯಾಲಯದಿಂದ 16 ಜನ ಸ್ವಯಂ ಸೇವಕ, ಸೇವಕಿಯರು ಭಾಗವಹಿಸಿದ್ದರು. ಪಿ.ಸಿ.ಜಾಬಿನ್‌ ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ.ಪಿ.ಪಿ. ಸಮೋರೆಕರ್‌ ಕರ್ನಾಟಕದ ತಂಡಕ್ಕೆ ಕಾಂಟಿಜೆಂಟ್‌ ಲೀಡರ್‌ ಆಗಿ ಆ ತಂಡದೊಂದಿಗೆ ಪ್ರತಿನಿಧಿಸಿದ್ದರು.

28 ರಾಜ್ಯಗಳ ಸ್ವಯಂ ಸೇವಕ, ಸೇವಕಿಯರು ಭಾಗವ­ಹಿಸಿದ್ದರು. ಡಿ 14ರಂದು ತೇಜಪುರ್‌ ವಿಶ್ವವಿದ್ಯಾಲಯದ ಉಪಕುಲಪತಿ ಎಂ.ಕೆ.ಚೌಧರಿ ಶಿಬಿರವನ್ನು ಉದ್ಘಾಟಿಸಿದರು. ಡಾ.ಬಾಲಾ ಲುಕೇಂದರ್‌ ಅವರಿಂದ ಸಮೂಹ ಮಾಧ್ಯಮ ಸಂಪರ್ಕ, ಪತ್ರಿಕೋದ್ಯಮಗಳ ಕುರಿತು ಭಾಷಣ, ಮಧ್ಯಾಹ್ನ ಅಮಿಯಾ ದಾಸ್‌ ಅವರಿಂದ ಆಹಾರ ಭದ್ರತೆ ಹಾಗೂ ಬದಲಾವಣೆಯ ಬೇಸಾಯ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು.

ಇಂದ್ರಜಿತ್‌್ ಸಿನ್ಹಾ ಅವರಿಂದ ವೇ ಫೌಂಡೇಶನ್‌ ಹಾಗೂ ಜೀವನ ಕೌಶಲದ ಬಗ್ಗೆ ತಿಳಿಸಿಕೊಡಲಾಯಿತು. ಸಿಬ್‌ಸಾಗರಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಯಿತು. ಅಲ್ಲದೇ, ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ  ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಯಿತು. ಕರ್ನಾಟಕ ತಂಡದ ಶರಣ್ಯ ಶಶಿಕುಮಾರ ಹಾಗೂ ಶುಭ ಮಾರ್ಕಂಡೆ ಅವರು ಕ್ವಿಜ್‌ದಲ್ಲಿ ಬಹುಮಾನ ಪಡೆದು­ಕೊಂಡರು.

ಗುಂಪು ಚರ್ಚೆಯಲ್ಲಿ ಶ್ರುತಿ ನಾಯ್ಡು ಹಾಗೂ ದೀಪಿಕಾ ಕೆರೂರು ಭಾಗವಹಿಸಿದ್ದರು. ಕವಿವಿ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಾಲ್ಗೊಂಡಿದ್ದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.