ADVERTISEMENT

ಆರೋಗ್ಯ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 8:50 IST
Last Updated 7 ಆಗಸ್ಟ್ 2012, 8:50 IST

ಧಾರವಾಡ: `ದೇಶದ ಬದಲಾವಣೆ ಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರು, ಮಕ್ಕಳಿಗೆ ಯೋಗ ಕಲಿಸುವ ಮೂಲಕ ಸದೃಢ ಸಮಾಜ ನಿರ್ಮಿಸ ಬೇಕು~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಡಿವೆಪ್ಪ ಮನಮಿ ಹೇಳಿದರು.

ಇಲ್ಲಿಯ ಗಾಂಧಿನಗರದ ರುಡಸೆಟ್ ಸಂಸ್ಥೆಯಲ್ಲಿ ಆಯುಷ್ ನಿರ್ದೇಶ ನಾಲಯ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ಪ್ರಶಿಕ್ಷಣ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. `ಪರಿಸರ ಬದಲಾವಣೆ ಹಾಗೂ ಆಹಾರ ಪದ್ಧತಿ ಬದಲಾವಣೆಯಿಂದ ಇಂದು ಅನೇಕ ಹೊಸ ತರಹದ ರೋಗ ಗಳು ಉದ್ಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಇಂಗ್ಲಿಷ್‌ಔಷಧಿಯಿಂದ ಬೇಸತ್ತ ಜನತೆ, ಆಯುರ್ವೇದದತ್ತ ಮುಖ ಮಾಡು ತ್ತಿದ್ದಾರೆ. ಇದರಿಂದ ಆಯುರ್ವೇದ ಮತ್ತೆ ಮರುಜೀವ ಪಡೆದುಕೊಂಡಿದೆ~ ಎಂದರು.

ವಿಧಾನಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಶಿಕ್ಷಕರು ಯೋಗ ಕಲಿಯುವ ಮೂಲಕ ತಮ್ಮ ಶಾಲೆಯ ಮಕ್ಕಳಿಗೆ ಯೋಗ ಕಲಿಸಿ, ಅವರ ಮಾನಸಿಕ, ದೈಹಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಚಂದ್ರಕಾಂತ ಬೆಲ್ಲದ, ಸಮತೋಲನ ಆಹಾರ ಕ್ರಮ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವು ದರ ಮೂಲಕ ಸದೃಢ ಆರೋಗ್ಯ ಹೊಂದಲು ಸಹಾಯವಾಗುತ್ತದೆ~ ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಣ್ಣ ತೋಟದ, ಡಾ.ಮಲ್ಲಿ ಕಾರ್ಜುನ ಎ.ಎಸ್., ಡಾ.ಬಿ.ಪಿ. ಪೂಜಾರಿ, ರುಡ್‌ಸೆಟ್ ನಿರ್ದೇಶಕ ಎಂ.ಡಿ.ವೀರಾಪುರ, ಡಾ.ಶಂಕರ ಹಿರೇಮಠ, ಜೀವನ ಪತ್ರಿಕೆಯ ಸಹ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹಾಜರಿದ್ದರು.

ಆರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ತಾಲ್ಲೂಕಿನ ಸುಮಾರು 100 ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.