ಹುಬ್ಬಳ್ಳಿ: ಪಕ್ಷದ ಬಲವರ್ಧನೆಗೆ ಮತ್ತು ರಾಜಕೀಯವನ್ನು ಶುಭ್ರಗೊ ಳಿಸಲು ಪಕ್ಷದ ಕಾರ್ಯಕರ್ತರು ಒಂದಾಗಿ ಶ್ರಮಿಸಬೇಕು ಎಂದು ಎನ್‌ಸಿಪಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಶೋಕ ಜವಳಿ ಸಲಹೆ ನೀಡಿದರು.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ 14ನೇ ವರ್ಷದ ಸಂಸ್ಥಾಪನಾ ದಿನಾ ಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.
ಶೀಘ್ರದಲ್ಲಿ ಬಿಜೆಪಿ ಸರ್ಕಾರ ಪತನ ಗೊಳ್ಳಲಿದ್ದು, ಯಾವ ಕ್ಷಣದಲ್ಲಾದರೂ ಚುನಾವಣೆ ಘೋಷಣೆ ಆಗಬಹುದು. ಚುನಾವಣೆ ಕಾರ್ಯಕರ್ತರು ಸಿದ್ಧರಾಗಬೇಕೆಂದರು.
ನಂತರ ಪಕ್ಷದ ಕಾರ್ಯಕರ್ತರು ನಗರದ ಮದರ್ ಥೆರೆಸಾ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಹಣ್ಣು ವಿತರಿಸಿದರು.
ರಾಜ್ಯ ಘಟಕದ ಉಪಾಧ್ಯಕ್ಷ ಸಿ.ವಿ. ಜೇಮ್ಸಕುಮಾರ, ಎ.ಆರ್. ಕ್ಲ್ಲಿಲೇ ದಾರ, ಕಾರ್ಯದರ್ಶಿ ಎಂ.ಕೆ. ಮಕ್ಕುಬಾಯಿ, ರೇಣುಕಾ ಶಿಂಧೆ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ತಳಕಲ್ಲಮಠ ಹಾಗೂ ವಿ.ಜಿ. ಬುಳ್ಳಾನವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.