ADVERTISEMENT

ಕಳಸಾ ಬಂಡೂರಿ ರಥಯಾತ್ರೆ: ಆಮರಣಾಂತ ಉಪವಾಸಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 4:20 IST
Last Updated 17 ನವೆಂಬರ್ 2012, 4:20 IST
ಕಳಸಾ ಬಂಡೂರಿ ರಥಯಾತ್ರೆ: ಆಮರಣಾಂತ ಉಪವಾಸಕ್ಕೆ ನಿರ್ಧಾರ
ಕಳಸಾ ಬಂಡೂರಿ ರಥಯಾತ್ರೆ: ಆಮರಣಾಂತ ಉಪವಾಸಕ್ಕೆ ನಿರ್ಧಾರ   

ನವಲಗುಂದ: ಈ ಭಾಗದ ರೈತರ ಉಸಿರಾಗಿರುವ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ರೈತಸೇನಾ ಕರ್ನಾಟಕ ಹಾಗೂ ಕಳಸಾ ಬಂಡೂರಿ ಹೋರಾಟ ಸಮಿತಿಯ ಆಶ್ರಯದಲ್ಲಿ ಬದಾಮಿಯ ಬನಶಂಕರಿ ದೇವಸ್ಥಾನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರಾರಂಭಿಸಿರುವ ರಥಯಾತ್ರೆ ಶುಕ್ರವಾರ ನವಲಗುಂದಕ್ಕೆ ಆಗಮಿಸಿ ರೈತರಲ್ಲಿ ಜಾಗೃತಿ ಮೂಡಿಸಿತು.

ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರ ನೆಮ್ಮದಿಯ ಬದುಕಿಗೆ ಕಳಸಾ ಬಂಡೂರಿ ನಾಲಾ ಯೋಜನೆಯ ಅವಶ್ಯಕತೆ ಕುರಿತು ತಿಳಿಹೇಳಲಾಯಿತು. ಈ ಯೋಜನೆಯ ಹೆಸರಿನ ಮೇಲೆ ರೈತರ ಶೋಷಣೆ ನಿಲ್ಲಬೇಕು. ರೈತ ಬಾಂಧವರು ಈ ಹೋರಾಟದಲ್ಲಿ ಪಕ್ಷಾತೀತವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.

ಹರಿಮಂದಿರದ ಮುಂದೆ ಸಭೆಯಲ್ಲಿ ರೈತ ಸೇನಾದ ಅಧ್ಯಕ್ಷ ವಿರೇಶ ಸೊಬರದಮಠ ಮಾತನಾಡಿ, ಬರದಿಂದ ಕಂಗೆಟ್ಟಿರುವ ರೈತರ ಸಮಸ್ಯೆಗಳಿಗೆ ಕಳಸಾ ಬಂಡೂರಿ ನಾಲಾ ಯೋಜನೆಯೊಂದೇ ಪರಿಹಾರ ಎಂದರು.
 
ಬದಾಮಿ ಬನಶಂಕರಿ ದೇವಸ್ಥಾನದಿಂದ ಆಕ್ಟೋಬರ್ 25 ರಿಂದ ಪ್ರಾರಂಭವಾಗಿರುವ ಈ ರಥಯಾತ್ರೆ ಇಂದಿಗೆ 21 ದಿನಗಳಾಗಿವೆ. ಇದೇ 20 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಯೋಜನೆ ಅನುಷ್ಠಾನವಾಗು ವವರೆಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆನಂದ ಹೊಸಗೌಡರ, ಎಚ್.ಕೆ. ಲಕ್ಕಣ್ಣವರ, ಕೆಂಚಪ್ಪನವರ, ಸುಭಾಸ ಬಾಳಿಕಾಯಿ, ಎಸ್.ಆರ್.ಅಂಬಲಿ, ಅಪ್ಪಣ್ಣ ಹಿರಗಣ್ಣವರ, ಈಶ್ವರ ಮೀಸಿ, ಶರಣಪ್ಪ ಕೊಪ್ಪದ, ಪ್ರದೀಪ ಪೂಜಾರ, ಕಲ್ಲನಗೌಡ ಬಸನಗೌಡ್ರ, ಬಸವರಾಜ ಕುಂದಗೋಳ, ಈರಣ್ಣ ಮೊರಬಣ್ಣವರ, ಪಿ.ಸಿ.ಚೆನ್ನಪ್ಪಗೌಡರ, ಎಸ್.ಪಿ.ಕೆಂಚಪ್ಪನವರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.