ಧಾರವಾಡ: ನಗರದ ಕೆಲವು ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಅನಧಿಕೃತ ವಾಗಿ ಹೆಣ್ಣು ಭ್ರೂಣ ಗುರುತಿಸುವ ಕಾರ್ಯ ನಡೆದಿದೆ ಅಲ್ಲದೇ ಗರ್ಭಪಾತ ವನ್ನೂ ಮಾಡಲಾಗುತ್ತಿದ್ದು, ಅಂಥ ನರ್ಸಿಂಗ್ ಹೋಮ್‌ಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಲಕ್ಷ್ಮಣ ದೊಡಮನಿ, `ಹೆಣ್ಣು ಭ್ರೂಣ ಲಿಂಗ ಪರೀಕ್ಷೆ ಮತ್ತು ಗರ್ಭಪಾತವನ್ನು ಕೆಲವು ಖಾಸಗಿ ನರ್ಸಿಂಗ್ ಹೋಮ್‌ಗಳು ವ್ಯಾಪಾರವನ್ನಾಗಿ ಮಾಡಿಕೊಂಡಿವೆ. ಲಿಂಗ ಪರೀಕ್ಷೆ ನಿಷೇಧ ಕಾಯ್ದೆ ಉಲ್ಲಂಘಿಸುತ್ತಿವೆ ಎಂದು ಆಪಾದಿ ಸಿದರು.
ಕೆಲವು ನರ್ಸಿಂಗ್ ಹೋಂ ಗಳಲ್ಲಿ ಹೆಣ್ಣು ಭ್ರೂಣ ಗುರುತಿಸಲು ರೂ 5 ಸಾವಿರದಿಂದ 10 ಸಾವಿರ ಹಾಗೂ ಗರ್ಭಪಾತ ಮಾಡಲು ಕೂಡ ರೂ 5ರಿಂದ 10 ಸಾವಿರ ಪಡೆಯಲಾಗುತ್ತಿದೆ ಗರ್ಭಪಾತಕ್ಕೆ ಒಳಗಾದವರೇ ನೇರವಾಗಿ ಹೇಳಿದ್ದಾರೆ. ಅದೂ ಅಲ್ಲದೇ ಆಸ್ಪತ್ರೆಯ ತ್ಯಾಜ್ಯವನ್ನು ಈ ವೈದ್ಯರು ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡುವುದಿಲ್ಲ.
ಬೇರೆಯ ವರ ಜಾಗದಲ್ಲಿ ಬೇಕಾಬಿಟ್ಟಿ ಯಾಗಿ ಚೆಲ್ಲುತ್ತಾರೆ. ಆದ್ದರಿಂದ ಇಂಥ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅವರ ವೈದ್ಯ ವೃತ್ತಿ ನೋಂದಣಿಯನ್ನು ರದ್ದುಪಡಿಸಲು ಜಿಲ್ಲಾ ಆರೋಗ್ಯಾಧಿಕಾರಿ ಭಾರತೀಯ ವೈದ್ಯಕೀಯ ಮಂಡಳಿಗೆ ಶಿಫಾರಸು ಮಾಡಬೇಕು' ಎಂದು ಪ್ರತಿಭಟನೆಯ ವೇಳೆ ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಯಲ್ಲಪ್ಪ ಮಂಟೂರ, ವಿಜಯ ಕುಂದಗೋಳ, ರವಿ ಸಾಂಬ್ರಾಣಿ, ಮಹೇಶ ಟುಮಕಿ, ನಾರಾಯಣ ಮಾದರ, ಶಬ್ಬೀರ ಅತ್ತಾರ, ಸಿಡ್ಲಪ್ಪ ಹೆಗಡೆ, ಪರಶುರಾಮ ದೊಡ್ಡಮನಿ ಮತ್ತಿತರರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.