ADVERTISEMENT

ಧಾರವಾಡ: ಸೂಪಶಾಸ್ತ್ರ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:05 IST
Last Updated 6 ಫೆಬ್ರುವರಿ 2012, 6:05 IST

ಧಾರವಾಡ: “ಹದಿನಾರನೇ ಶತಮಾನ ದಲ್ಲಿ ರಚಿಸಿದ ಪಾಕಶಾಸ್ತ್ರದ ಪುಸ್ತಕವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುವ ಮೂಲಕ ನಮ್ಮ ಭಾಗದ ತಿಂಡಿ- ತಿನಿಸುಗಳ ಬಗ್ಗೆ ಇಡೀ ಜಗತ್ತಿಗೆ ಪರಿಚಯಿಸಿದಂತಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.

ಇಲ್ಲಿನ ಮಂದಾರ ಹೊಟೇಲ್‌ನಲ್ಲಿ ಇನ್‌ಟ್ಯಾಕ್ ಸಂಸ್ಥೆ ಆಯೋಜಿಸಿದ್ದ ಸಮಾ ರಂಭದಲ್ಲಿ ಮಧುಕರ ಕೋಣನತಂಬಿಗೆ ಅವರು ಅನುವಾದಿಸಿದ ಸೂಪಶಾಸ್ತ್ರದ ಇಂಗ್ಲಿಷ್ ಅನುವಾದಿತ ಕೃತಿ, ಡಾ. ಯಶೋಧಾ ಭಟ್ ಅವರ ದೆಹಲಿ ಸಿಟಿ ಆಫ್ ಇಕೋಸ್ ಹಾಗೂ ಡಾ. ವೀಣಾ ಮೊಹಿತೆ ಅವರ ಮಹಾಕೂಟ ಪ್ರಬಂಧ ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು,

ನಳಪಾಕ ಬಹಳ ಜನರಿಗೆ ಗೊತ್ತಿದೆ, ಆದರೆ 16ನೇ ಶತಮಾನದಲ್ಲಿನ ಮಂಗರ ಸರ ಆಹಾರ ಪದ್ಧತಿ ಗೊತ್ತಿರಲಿಲ್ಲ. ಇದನ್ನು ಪುಸ್ತಕ ರೂಪದಲ್ಲಿ ಹೊರತಂದಿ ರುವುದು ಹೆಮ್ಮೆಯ ಸಂಗತಿ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಆಹಾರ ಪದ್ಧತಿಗಳಿವೆ.   ಐಹೊಳೆ, ಪಟ್ಟದಕಲ್ಲು ಪ್ರದೇಶ ಬೆಳಕಿಗೆ ಬಂದಿದ್ದು, ಡಾ. ಮೋಹಿತೆ ಅವರ ಮಹಾಪ್ರಬಂಧದ ಮೂಲಕ ಮಹಾಕೂಟ ಸಹ ಬೆಳಕಿಗೆ ಬಂದಂತಾಗಿದೆ ಎಂದ ಹೇಳಿದರು.

ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿ, 21ನೇ ಶತಮಾನದಲ್ಲಿದ್ದರೂ ಸಹ ಮಡೆ ಮಡೆಸ್ನಾನ ಪದ್ಧತಿ ಸರಿಯಲ್ಲ. ಇದರಿಂದ ಪುಣ್ಯ ಬರುವು ದಿಲ್ಲ, ಇಂಥ ಅನಿಷ್ಟ ಪದ್ಧತಿಯನ್ನು ನಿಷೇಧಿಸಬೇಕು. ವಿದ್ಯಾವಂತರು ಅವಿದ್ಯಾವಂತರಂತೆ ವರ್ತಿಸುತ್ತಿರುವು ದರಿಂದ ದೇಶದ ಬದಲಾವಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

16ನೇ ಶತಮಾನದಲ್ಲಿ ಹುಣಸೂರು ತಾಲ್ಲೂಕಿನ ಕಲ್ಲಳ್ಳಿ ಸಂಸ್ಥಾನದ ದೊರೆ ಮೂರನೇ ಮಂಗರಸನ ಕಾಳದ ನಗರ ದಂತೆ ವೇದಿಕೆಯನ್ನು ಸಿದ್ಧಪಡಿಸ ಲಾಗಿ ತ್ತು. ಉತ್ತರ ಕರ್ನಾಟಕ ಹಾಗೂ ಕರಾ ವಳಿ ಪ್ರದೇಶದ ಅಪರೂಪದ ಸಾಂಪ್ರ ದಾಯಿಕ ತಿಂಡಿ, ತಿನಿಸು, ಭಕ್ಷ್ಯ ಭೋಜ್ಯ ಗಳ ಆಹಾರ ಮೇಳ ಸಹ ಏರ್ಪಡಿಸ ಲಾಗಿತ್ತು. 
ಈ ಪುಸ್ತಕದಲ್ಲಿ ಉತ್ತರ ಕರ್ನಾಟಕ 300 ತಿಂಡಿ- ತಿನಿಸುಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಸಾಂಪ್ರದಾ ಯಿಕ ತಿನಿಸುಗಳಿಗೆ ಆದ್ಯತೆ ನೀಡಲಾಗಿದೆ. ಜೋಳದ ರೊಟ್ಟಿ, ಚಪಾತಿ, ಸಿಹಿ ತಿಂಡಿಗಳ ಮಾಹಿತಿ ಒದಗಿಸಲಾಗಿದೆ.

ಲೇಖಕ ಮಧುಕರ ಕೋಣನತಂಬಿಗೆ, ಹುಡಾ ಅಧ್ಯಕ್ಷ ದತ್ತಾ ಡೋರ್ಲೆ, ಪ್ರವೀಣ ಮಿತ್ತಲ್, ಬಿ.ಎಸ್.ಪಾಟೀಲ, ಅಶ್ವಥ್‌ನಾರಾಯಣ ವೇದಿಕೆಯಲ್ಲಿದ್ದರು. ಸುರಭಿ ಸುರೇಶ ಪ್ರಾರ್ಥಿಸಿದರು. ಎನ್. ಪಿ.ಭಟ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.