ADVERTISEMENT

ಪಾಲಿಕೆ ಅಧಿಕಾರಿಗಳೊಂದಿಗೆ ರಾಯನಗೌಡ್ರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 8:05 IST
Last Updated 7 ಫೆಬ್ರುವರಿ 2012, 8:05 IST

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಪ್ರಫುಲ್ಲಚಂದ್ರ ರಾಯನಗೌಡ್ರ ಮತ್ತು ನಗರ ಯೋ ಜನಾ ಉಪ ನಿರ್ದೇಶಕ ಎ.ಎಸ್. ಕಾಂಬ್ಳೆ ಅವರ ಮಧ್ಯೆ ತೀವ್ರ ವಾಗ್ವಾದ ನಡೆದ ಘಟನೆ ಸೋಮವಾರ ಪಾಲಿಕೆ ಆವರಣದಲ್ಲಿ ನಡೆದಿದೆ.

ಕೃಷಿಯೇತರ (ಎನ್‌ಎ) ಭೂಮಿ ಯಾಗಿ ಪರಿವರ್ತನೆಯಾಗದ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡದಿರುವುದೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. 15 ದಿನಗಳ ಹಿಂದಷ್ಟೇ ವರ್ಗವಾಗಿ ಬಂದಿರುವ ಕಾಂಬ್ಳೆ ಅವರಿಗೆ ಎಲ್ಲ ಪಾಲಿಕೆ ಸದಸ್ಯರ ಮುಖ ಪರಿಚಯ ಇನ್ನೂ ಆಗಿಲ್ಲ.

ಪರವಾನಗಿ ಪಡೆಯಲು ಬಂದ ರಾಯನಗೌಡ್ರ ಅವರ ಪರಿಚಯ ವಿಲ್ಲದ ಕಾಂಬ್ಳೆ, `ಎನ್‌ಎ ಆಗದ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡು ವುದು ಸಾಧ್ಯವಿಲ್ಲ~ ಎಂದು ತಿಳಿಸಿದರು. ಸದಸ್ಯನಿಗೆ ನೀಡಬೇಕಾದ ಗೌರವ ನೀಡುತ್ತಿಲ್ಲ ಎಂದು ರಾಯನಗೌಡ್ರ ಆಕ್ರೋಶ ವ್ಯಕ್ತಪಡಿಸಿದರು. ಆಗ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾ ದ ನಡೆಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

`ಪಾಲಿಕೆ ಸದಸ್ಯನ ಮಾತನ್ನೇ ಕೇಳು ವುದಿಲ್ಲವೆ~ ಎಂದು ರಾಯನಗೌಡ್ರ ಏಕವಚನದಲ್ಲಿ ಸಂಬೋಧಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಹೇಳಲಾಗಿದೆ. ಪರಿಸ್ಥಿತಿ ವಿಕೋ ಪಕ್ಕೆ ಹೋಗುವ ಸೂಚನೆ ಸಿಕ್ಕಾಗ ಅಲ್ಲಿಯೇ ಇದ್ದ ಪಾಲಿಕೆ ಹಿರಿಯ ಅಧಿ ಕಾರಿಗಳು ಇಬ್ಬರನ್ನೂ ಸಮಾಧಾನ ಪಡಿಸಿದರು ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಾಂಬ್ಳೆ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿ ದಾಗ, `ರಾಯನಗೌಡ್ರ ಅವರೊಂದಿಗೆ ವಾಗ್ವಾದ ಆಗಿರುವುದು ನಿಜ. 15 ದಿನಗಳ ಹಿಂದಷ್ಟೇ ನಾನು ಪಾಲಿಕೆಗೆ ಬಂದಿದ್ದೇನೆ.

ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸಲು ಹೋಗಿ ನಿಂದನೆಗೆ ಒಳಗಾಗಬೇಕಾಯಿತು. ಘಟನೆ ಕುರಿ ತಂತೆ ಪಾಲಿಕೆ ಆಯುಕ್ತರಿಗೂ ಮಾಹಿತಿ ನೀಡಿದ್ದೇನೆ~ ಎಂದು ಪ್ರತಿಕ್ರಿಯಿಸಿದರು.

`ಪಾಲಿಕೆಯ ಹಿರಿಯ ಸದಸ್ಯರಾದ ರಾಯನಗೌಡ್ರ ನಾವು ಕಾನೂನು ಬದ್ಧವಾಗಿ ಕಾರ್ಯ ನಿರ್ವಹಿಸಲು ಮಾರ್ಗದರ್ಶನ ಮಾಡಬೇಕೇ ವಿನಃ ನಮ್ಮನ್ನು ದಬಾಯಿಸುವುದು ಸರಿ ಯಲ್ಲ~ ಎಂದೂ ಅವರು ಹೇಳಿದರು.

ಘಟನೆಯಿಂದ ಆಕ್ರೋಶಗೊಂಡಿದ್ದ ರಾಯನಗೌಡ್ರ ಅವರನ್ನು ಕೆಲವು ಜನ ಪಾಲಿಕೆ ಸದಸ್ಯರು ಸಮಾಧಾನಪಡಿಸಿ ದರು ಎಂದು ಹೇಳಲಾಗಿದೆ. ಕೆಲ ದಿನಗಳ ಹಿಂದೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಕಾಂಬ್ಳೆ ಕೆಲ ಸದಸ್ಯರ ಆಕ್ರೋಶಕ್ಕೆ ತುತ್ತಾಗಿದ್ದರು. ಕಟ್ಟಡ ಪರವಾನಗಿ ಪತ್ರ ನೀಡಲು ಬಿಗಿಗೊಳಿಸಿದ ನಿಯಮಾವಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.