ADVERTISEMENT

ಭ್ರಷ್ಟಾಚಾರ: ಎಬಿವಿಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 10:15 IST
Last Updated 3 ಮೇ 2011, 10:15 IST

ಧಾರವಾಡ: ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಭ್ರಷ್ಟಾಚಾರ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೋಮವಾರ ಕರ್ನಾಟಕ ವಿಶ್ವವಿದ್ಯಾಲಯದ ಕಟ್ಟಡದ ಮುಂದೆ ಕಸ ಗುಡಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಜೆ. ಶಶಿಧರ ಪ್ರಸಾದ್, ವಿಜಾಪುರ ಮಹಿಳಾ ವಿವಿಯ ಮೊದಲ ಕುಲಪತಿ ಡಾ. ಸೈಯೀದಾ ಅಖ್ತರ್, ರಾಜೀವ ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ಪ್ರಭಾಕರನ್ ಮೊದಲಾದವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎಬಿವಿಪಿ ಪ್ರಾಂತ್ಯ ಸಹ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ರಾಜ್ಯ ಸಂಚಾಲಕ ಪ್ರಕಾಶ ಕಟ್ಟಿಮನಿ, ವಿ.ವಿ. ಮುಖಂಡರಾದ ಜಗದೀಶ ಮಾನೆ, ಎಂ.ತೇಜಸ್ವಿನಿ, ಶರಣು ಅಂಗಡಿ, ಸಂತೋಷ ಕುಂಬಾರ, ಮಂಜುನಾಥ ಮಾದರ, ಕಂಠೆಪ್ಪ ಗುಡಿಮನಿ, ಬಸವರಾಜ ಬೆನಕನಹಳ್ಳಿ, ಹಾಲೇಶ ತಾಂಬರಗುಂಡಿ, ಮಧುಸೂದನ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.