ADVERTISEMENT

ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆಗಳ ಸರಮಾಲೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 5:55 IST
Last Updated 17 ಫೆಬ್ರುವರಿ 2012, 5:55 IST
ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆಗಳ ಸರಮಾಲೆ
ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆಗಳ ಸರಮಾಲೆ   

ಗುಡಗೇರಿ: ಶಾಲೆಯಲ್ಲಿ ಶುದ್ಧವಾದ ಕುಡಿಯಲು ನೀರು ಇಲ್ಲ, ಆಟದ ಮೈದಾನವಿಲ್ಲ, ಶಾಲೆಯ ಸುತ್ತ ಮುತ್ತ ಕಸ ಕಡ್ಡಿ, ಚರಂಡಿ ನೀರಿನಿಂದ ಕೆಟ್ಟ ದುರ್ವಾಸನೆ ಹರಡುತ್ತಿದ್ದು, ಮಳೆ ಗಾಲದಲ್ಲಿ ಶಾಲೆಗಳು ಸೋರು ತ್ತವೆ.......  ಪ್ರಾಥಮಿಕ ಶಾಲಾ ಮಕ್ಕಳ್ಳು ಸಮಸ್ಯೆಗಳ ಸರಮಾಲೆಯನ್ನೇ ಸುರಿಸಿದರು.

ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಯಲ್ಲಿ  ಗುರುವಾರ ಜರುಗಿದ   ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮದ ಎಲ್ಲಾ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತಮ್ಮ  ಶಾಲೆಯ ಲ್ಲಿರುವ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿ.ಡಿ.ಓ, ಸದಸ್ಯರ ಎದುರು ತಮ್ಮ ಅಳಲನ್ನು ಸಭೆಯಲ್ಲಿ ತೊಡಿಕೊಂಡರು.

ಸರಕಾರಿ ಗಂಡು ಮಕ್ಕಳಶಾಲೆಯ ವಿದ್ಯಾರ್ಥಿ ಅಭಿಷೇಕ ನಾವ್ಹಿ, ಮಳೆ ಗಾಲದಲ್ಲಿ ಶಾಲೆಯ 4 ಕಟ್ಟಡಗಳು ಸೋರುತ್ತವೆ, ಕುಳಿತುಕೊಳ್ಳಲು ಜಾಗವಿ ರುವುದಿಲ್ಲ, ನಾವು ಹೇಗೆ ಅಭ್ಯಾಸ ಮಾಡಬೇಕು. ಶಾಲೆಯಲ್ಲಿ ಕಂಪ್ಯೂಟರ್‌ಗಳಿವೆ ಆದರೆ ಕಲಿಸುವವರಿಲ್ಲ. ಚಿತ್ರಕಲಾ ಶಿಕ್ಷಕರಿಲ್ಲ. ನಮಗೆ ಚಿತ್ರ ಬಿಡಿಸುವ ಆಸೆ, ಏನು ಮಾಡಬೇಕು ಎಂದು ಕೇಳಿದರು. ಗ್ರಾ.ಪಂ ಅಧ್ಯಕ್ಷ ರವಿರಾಜ ಮುಗಳಿ ಮಾತನಾಡಿ, ಕಟ್ಟಡ ದುರಸ್ತಿ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಉಳಿದ ವಿಷಯದ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ತಿಳಿಸುತ್ತೇವೆ ಎಂದರು.

ಎಫ್.ಸಿ.ಎಂ ಶಾಲೆಯ ವಿದ್ಯಾರ್ಥಿ ಸೋಮಾಪುರ ಮಾತನಾಡಿ ಗ್ರಾಮ ಪಂಚಾಯಿತಿಯಿಂದ ಶಾಲಾ ಮಕ್ಕಳಿಗೆ ಏನು ಸೌಲಭ್ಯಗಳಿವೆ ಎಂದು ಕೇಳಿದಾಗ ಪಿ.ಡಿ.ಓ ಎನ್.ಕೆ. ದೊಡ್ಮನಿ ಮಾತನಾಡಿ ನಮ್ಮ ಪಂಚಾಯಿತಿಯಿಂದ ವಿದ್ಯಾರ್ಥಿ ಗಳಿಗೆ ವಿಷೇಷ ಯಾವ ಸೌಲಭ್ಯಗಳೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಎಲ್.ಪಿ.ಎಸ್. ನಂ 1 ಶಾಲೆಯ ವಿದ್ಯಾರ್ಥಿ ನಾಗರತ್ನಮ್ಮ ಮಳ್ಳೊಳ್ಳಿ ಸರ್ ಬೇರೆ ಶಾಲೆಗಳಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್ ಸೌಲಭ್ಯವಿದೆ ಆದರೆ ನಮ್ಮ ಶಾಲೆಯಲ್ಲಿ ಯಾಕೆ ಇಲ್ಲ, ಆಟದ ಮೈದಾನವಿಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ ಎಂದು ಕೇಳಿದಾಗ ಪಿ.ಡಿ.ಓ ಮಾತನಾಡಿ ನೀರಿನ ಸೌಲಭ್ಯ ತಕ್ಷಣ ನೀಡುವದಾಗಿ ಹೇಳಿದರು.

ಹೆಣ್ಣು ಮಕ್ಕಳ ಶಾಲೆ ವಿದ್ಯಾರ್ಥಿ ಪದ್ಮಾ ಸಾತಗೂಂಡು ಮಾತನಾಡಿ ನಮ್ಮ ಶಾಲೆಯಲ್ಲಿ ನೀರಿನ ಪೈಪುಗಳಿವೆ ಆದರೆ ಅದರಲ್ಲಿ ನೀರು ಬರುವುದಿಲ್ಲ ಎಂದು ಹೇಳಿದಳು
ಎಫ್.ಸಿ.ಎಂ ಶಾಲೆ ವಿದ್ಯಾರ್ಥಿ ಭೂಷಣ ಹಿರೇಗೌಡ್ರ ಮಾತನಾಡಿ ನಮ್ಮ ಶಾಲೆಯಲ್ಲಿ ಜಾಗವಿದೆ ಆದರೆ ಖೋ ಖೋ, ಕಬಡ್ಡಿ , ವಾಲಿಬಾಲ್, ಮೈದಾನ ನಿರ್ಮಿಸಿಕೂಡಬೇಕೆಂದು ಕೇಳಿದರು. ಮಕ್ಕಳ ವಿಶೇಷ ಗ್ರಾಮ ಸಭೆಗೆ ತಾಲ್ಲೂಕು ಶಿಕ್ಷಣಾಧಿಕಾರಿ   ಆಗಮಿಸಿರಲಿಲ್ಲ.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿರಾಜ ಮುಗಳಿ, ಗ್ರಾ.ಪಂ ಉಪಾಧ್ಯಕ್ಷ ಶೈಲಾ, ಮಳಲಿ,ಸದಸ್ಯ ರಾದ ಜೀವನಗೌಡ ಯತ್ನಳ್ಳಿ , ಬಸವರಾಜ ಬೇಂಗೆರಿ, ಬಾಬು ಸೊಮಾಪುರ, ಶೇಕಪ್ಪ ನಿಚ್ಚಳ . ವಿನೋದ ಕತ್ತಿ , ಶಾಂತಾದೇವಿ ಮುಗಳಿ. ಅರ್ಜುನ ಕಟ್ಟಿಮನಿ, ಪಿ.ಡಿ.ಓ. ಎನ್.ಕೆ . ದೂಡ್ಡಮನಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.