ADVERTISEMENT

ಮನಗುಂಡಿ ಮಠದಲ್ಲಿ ಮಳೆ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 7:15 IST
Last Updated 9 ಆಗಸ್ಟ್ 2012, 7:15 IST

ಧಾರವಾಡ: ತಾಲ್ಲೂಕಿನ ಮನಗುಂಡಿ ಮಠವು ಕುಡಿಯುವ ನೀರಿನ ಸ್ವಾವಲಂಬನೆ ಸಾಧಿಸಿದ್ದು, ಸುಮಾರು 60 ಸಾವಿರ ಲೀಟರ್ ಸಾಮರ್ಥ್ಯದ ತೊಟ್ಟಿಯನ್ನು ಮಠದ ಸಭಾಂಗಣದ ತಳಭಾಗದಲ್ಲಿ ನಿರ್ಮಿಸಲಾಗಿದ್ದು, ಮಠದ ತಾರಸಿಯ ಮೇಲಿಂದ ಹರಿವ ನೀರು ತೊಟ್ಟಿಯಲ್ಲಿ ಸಂಗ್ರಹವಾಗಿದ್ದು, ಬರುವ ವರ್ಷದ ಮಳೆಗಾಲದವರೆಗೂ ಕುಡಿಯಬಹು ದಾಗಿದೆ.

ಈ ಕುರಿತು ಮಠದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಠದ ಪೀಠಾಧಿಕಾರಿ ಬಸವರಾಜ ಸ್ವಾಮೀಜಿ, `ಸುಮಾರು ಮೂರು ಲಕ್ಷ ವೆಚ್ಚದಲ್ಲಿ ಈ ತೊಟ್ಟಿಯನ್ನು ನಿರ್ಮಿಸಿ ತಾರಸಿ ನೀರನ್ನು ಸಂಗ್ರಹಿಸಿದ್ದು, ದಿನಾಲು 200 ಲೀಟರ್‌ನಂತೆ ಖರ್ಚಾದರೂ ಬರುವ ಜೂನ್ ವೇಳೆಗೆ ಈ ನೀರು ಸಾಕಾಗುತ್ತದೆ. ಮಳೆ ನೀರು ಆರೋಗ್ಯಕ್ಕೆ ಉತ್ತಮವಾಗಿದ್ದು, ಖನಿಜಯುಕ್ತ ನೀರಿನ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ. ಎಲ್ಲ ಶಾಲಾ- ಕಾಲೇಜು, ಕೈಗಾರಿಕೆಗಳು, ಸರ್ಕಾರಿ ಕಚೇರಿಗಳು ಈ ವ್ಯವಸ್ಥೆಯನ್ನು ಅಳವ ಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಚಿತ್ರದುರ್ಗದ ಎನ್.ಜಿ.ದೇವರಾಜ ರೆಡ್ಡಿ ಅವರು ಈ ಮಳೆ ನೀರು ಸಂಗ್ರಹಕ್ಕೆ ತಾಂತ್ರಿಕ ನೆರವು ನೀಡಿದ್ದಾರೆ. ಪ್ರತಿ ತಿಂಗಳು ಶಿವಾನುಭವ ಗೋಷ್ಠಿ ನಡೆ ಯಲಿದ್ದು, ಆ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೂ ಇದೇ ನೀರನ್ನು ನೀಡಲಾ ಗುವುದು. ಇದೀಗ ಉತ್ತಮ ಮಳೆಯಾ ಗುತ್ತಿರುವುದರಿಂದ ತೊಟ್ಟಿ ತುಂಬಿದ್ದು, ಉಳಿದ ನೀರನ್ನು ಮಠದ ಆವರಣ ದಲ್ಲಿರುವ ಬೋರ್‌ವೆಲ್‌ಗೆ ಬಿಟ್ಟು ಮೂಲಕ ಮರುಪೂರಣ ಮಾಡ ಲಾಗು ತ್ತಿದೆ. ಆದ್ದರಿಂದಲೇ ಬೋರ್ ಕೊರೆಸಿ ಏಳು ವರ್ಷಗಳಾದರೂ ಇನ್ನೂ ಎರಡು ಇಂಚು ನೀರು ಬರುತ್ತಿದೆ~  ಎಂದರು.

 ತಂತ್ರಜ್ಞ ದೇವರಾಜ ರೆಡ್ಡಿ ಮಾತನಾಡಿ, `ಸರ್ಕಾರಿ ಕಚೇರಿಗಳು ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಆಸಕ್ತಿ ವಹಿಸಬೇಕು. ನೀರನ್ನು ಬಹಳ ದಿನ ಇಟ್ಟರೆ ಕೆಡುತ್ತದೆ ಎಂಬ ಭಾವನೆ ತಪ್ಪು. 50 ವರ್ಷದ ಹಿಂದೆ ಸಂಗ್ರಹಿಸಿದ ನೀರನ್ನೇ ಇಂದಿಗೂ ಕುಡಿಯು ವವರಿದ್ದಾರೆ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.