ADVERTISEMENT

ಮೋದಿ ಹೆಸರು ಕೇಳಿದರೆ ವಿನಯ್‌ಗೆ ‘ಹಿಸ್ಟೀರಿಯಾ’

​ಪ್ರಜಾವಾಣಿ ವಾರ್ತೆ
Published 5 ಮೇ 2017, 6:52 IST
Last Updated 5 ಮೇ 2017, 6:52 IST
ಪ್ರಹ್ಲಾದ ಜೋಶಿ, ವಿನಯ ಕುಲಕರ್ಣಿ
ಪ್ರಹ್ಲಾದ ಜೋಶಿ, ವಿನಯ ಕುಲಕರ್ಣಿ   

ಧಾರವಾಡ: ಲೋಕಸಭಾ ಚುನಾವಣೆ­ಯಲ್ಲಿ ಸ್ಪರ್ಧಿಸಿ ಸೋತ ನಂತರ ಸಚಿವ ವಿನಯ ಕುಲಕರ್ಣಿ ಅವರು ಹತಾಶ­ರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೇಳಿದ ತಕ್ಷಣ ‘ಹಿಸ್ಟೀರಿಯಾ’ ಪೀಡಿತರಂತೆ ವರ್ತಿಸುತ್ತಾರೆ ಎಂದು ಸಂಸದ ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಆವರಣದಲ್ಲಿ ಶಿಕ್ಷಕರ ಸಂಘದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂ­ಡಿದ್ದ ಸಂದರ್ಭದಲ್ಲಿ ವಿನಯ ಕುಲಕರ್ಣಿ ನೀಡಿದ ಹೇಳಿಕೆಗೆ ಸಂಬಂಧಿ­ಸಿದಂತೆ ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ನನ್ನ ವಿರುದ್ಧ ನಿಂತು ಸೋತ ನಂತರ ವಿನಯ ಕುಲಕರ್ಣಿ ಹತಾಶರಾಗಿದ್ದಾರೆ. ತಮ್ಮ ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಇತರರ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಮೋದಿ ಹೆಸರು ಹೇಳಿದರೆ ಚಡಪಡಿಸುತ್ತಾರೆ’ ಎಂದು ಟೀಕಿಸಿದರು.

‘ಕೈಲಾಗದವರು ಮೈ ಪರಚಿ­ಕೊಂಡರು, ಕುಣಿಯಲು ಬಾರದವರು ನೆಲ ಡೊಂಕು ಎಂದರು ಅನ್ನುವ ಹಾಗಿದೆ ವಿನಯ ಕುಲಕರ್ಣಿ ಅವರ ವರ್ತನೆ. ಉಸ್ತುವಾರಿ ಸಚಿವರಾಗಿ ಎರಡು ವರ್ಷ ಕಳೆದರೂ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಆದರೂ, ಮತ್ತೊಬ್ಬರ ವಿರುದ್ಧ ಕೀಳುಮಟ್ಟದ ಮಾತುಗಳನ್ನಾಡುವುದನ್ನು ನಿಲ್ಲಿಸಿಲ್ಲ’ ಎಂದು ಜೋಶಿ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.