ADVERTISEMENT

ರಭಸದ ಗಾಳಿ–ಮಳೆ: ಧರೆಗುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:05 IST
Last Updated 17 ಮೇ 2018, 5:05 IST
ಧಾರವಾಡ ನಗರದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯ ನಡುವೆ ಆಟೋ ರಿಕ್ಷಾ ಸಾಗಿದ ದೃಶ್ಯ
ಧಾರವಾಡ ನಗರದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯ ನಡುವೆ ಆಟೋ ರಿಕ್ಷಾ ಸಾಗಿದ ದೃಶ್ಯ   

ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಬುಧವಾರ ಸಂಜೆ ರಭಸದ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಿತು.

ಹುಬ್ಬಳ್ಳಿಯಲ್ಲಿ ಬೀಸಿದ ರಭಸದ ಗಾಳಿಗೆ 12ಕ್ಕೂ ಅಧಿಕ ಮರಗಳು, ಮರದ ಟೊಂಗೆಗಳು ಮುರಿದು ಧರೆಗುರುಳಿವೆ. ನ್ಯೂ ಕಾಟನ್‌ ಮಾರ್ಕೆಟ್‌ನ ಶಾರದಾ ಹೋಟೆಲ್‌ ಸಮೀಪ ಮರವೊಂದು ಬುಡ ಸಮೇತ ಬಿದ್ದ ಪರಿಣಾಮ ಅದರ ಅಡಿ ನಿಲ್ಲಿಸಲಾಗಿದ್ದ ಒಂದು ಕಾರು ಮತ್ತು ಒಂದು ಬೈಕ್‌ ಜಖಂಗೊಂಡಿದೆ.

ವಿದ್ಯಾನಗರದ ಅಮೃತ್‌ ಟಾಕೀಸ್‌ ಬಳಿ ಕಿಮ್ಸ್‌ಗೆ ತೆರಳುವ ರಸ್ತೆ ಮೇಲೆ ಮರವೊಂದು ಬಿದ್ದ ಪರಿಣಾಮ ವಿದ್ಯುತ್‌ ತಂತಿ ಹರಿದುಬಿದ್ದಿದ್ದು, ಕಂಬ ಮುರಿದಿದೆ.

ADVERTISEMENT

ಗಾರ್ಡನ್‌ಪೇಟೆಯ ಸಂಗಮ ಬ್ಯಾಂಡ್‌ ಬಾಜಾ ಬಳಿ, ನಾಲಬಂದ ಓಣಿ, ನೇಕಾರ ನಗರದ ಶ್ರೀರಾಮ ಕಾಲೊನಿಯ 4ನೇ ಕ್ರಾಸ್‌, ಶರಾವತಿ ನಗರದ ಹನುಮಾನ್‌ ಗುಡಿ, ವೀರಾಪುರ ಓಣಿಯ 10ನೇ ನಂಬರ್‌ ಸ್ಕೂಲ್‌ ಬಳಿ, ಗೋಕುಲ ರೋಡ್‌ನ ಅಕ್ಷಯ ಪಾರ್ಕ್‌ ರಸ್ತೆ, ಸಿದ್ಧಾರೂಢಮಠ ಸಮೀಪದ ಗಣೇಶ ನಗರ 2ನೇ ಕ್ರಾಸ್‌, ನ್ಯೂ ಆನಂದ ನಗರದ ರೆಹಮತ್‌ ನಗರ, ಹಳೇ ಬಾದಾಮಿ ನಗರದ ವಿಠೋಬಾ ಭಾಯ್ ಕಲ್ಯಾಣಮಂಟಪ ಬಳಿ, ವಸಂತನಗರದ ಗಣೇಶ ಗುಡಿ ಸಮೀಪ, ಶಿರೂರು ಪಾರ್ಕ್‌ 2ನೇ ಹಂತದ ಮಿಶ್ರಾ ಪೇಡಾ ಅಂಗಡಿ ಬಳಿ ಮರಗಳು ಮತ್ತು ಮರಗಳ ಟೊಂಗೆಗಳು ಬಿದ್ದಿವೆ.

ಗಾಳಿ–ಮಳೆಯಿಂದಾಗಿ ನಗರದ ಬಹುತೇಕ ಕಡೆ ವಿದ್ಯುತ್‌ ಪೂರೈಕೆ ಸಂಪೂರ್ಣ ಸ್ಥಗಿತವಾಗಿರುವ ಬಗ್ಗೆ ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ.

ಧಾರವಾಡದಲ್ಲಿ ಮಧ್ಯಾಹ್ನ 3ಕ್ಕೆ ಕೆಲವೆಡೆ ಸಣ್ಣ ಪ್ರಮಾಣ ಮತ್ತು ತುಂತುರ ಮಳೆ ಆಗಿತ್ತು. ಸಂಜೆ 5.30ಕ್ಕೆ ಜೋರಾದ ಮಳೆ ಸುರಿಯಿತು. ಕೆಲವು ಕಡೆ ಸಂಚಾರಕ್ಕೆ ಸಮಸ್ಯೆಯಾಯಿತು.

ಗದಗ, ರೋಣದಲ್ಲಿ ಗಾಳಿ ಮಳೆ

ಗದಗ: ತಾಲ್ಲೂಕಿನ ನಾರಾಯಣಪುರ, ಕೋಟುಮಚಗಿ, ಮುಳಗುಂದ ಮತ್ತು ರೋಣ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧ
ವಾರ ಒಂದು ಗಂಟೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.