ADVERTISEMENT

ರಾಜ್ಯಮಟ್ಟದ ಮಂಥನಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 9:00 IST
Last Updated 19 ಸೆಪ್ಟೆಂಬರ್ 2011, 9:00 IST

ಹುಬ್ಬಳ್ಳಿ: ಮುಖದ ಮೇಲೆ ವರ್ಣಮಯ ಚಿತ್ರಗಳ ದರ್ಶನ, ಮಾಕ್‌ಪ್ರೆಸ್‌ನಲ್ಲಿ ಬುದ್ದಿಮತ್ತೆಯ ಪ್ರದ ರ್ಶನ. ಇವುಗಳ ಸಂಭ್ರಮಕ್ಕೆ ಕನ್ನಡಿ ಹಿಡಿದ ವಿದ್ಯಾರ್ಥಿ ಗಳ ನಗೆಯ ಅಲೆ. 

 ಇದೆಲ್ಲದರ ಸಮಾಗಮದೊಂದಿಗೆ ನಗರದ ಕಿಮ್ಸನ ಅಂಗಳದಲ್ಲಿ `ಮಂಥನ-11~ಕ್ಕೆ ಭಾನುವಾರ ತೆರೆಬಿತ್ತು.
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ `ಮಂಥನ-11~ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳಿಂದ 300ಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡರು. 35ಕ್ಕೂ ಹೆಚ್ಚು ಸ್ಪರ್ಧೆಗಳು ನಡೆದವು.  ಕಡೆಯ ದಿನದಂದು ಮ್ಯಾಡ್ ಆ್ಯಡ್ಸ್, ಚರ್ಚಾ ಸ್ಪರ್ಧೆ (ಇಂಗ್ಲಿಷ್), ಫೇಸ್ ಪೇಟಿಂಗ್ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದಕ್ಕೂ ಮುನ್ನ, ಶನಿವಾರ ಸಂಜೆ ನಡೆದ ಮೂವಿ ಸೂಫ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರದರ್ಶನಗಳ ಮೂಲಕ ಗಮನ ಸೆಳೆದರು. ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು `ಭೂಲ್ ಭುಲೈಯಾ~ ಚಿತ್ರ ಅನುಕರಿಸಿ ನಡೆಸಿಕೊಟ್ಟ ದೆವ್ವ ಬಿಡಿಸುವ ಕಾಮಿಡಿ ಕಾರ್ಯಕ್ರಮ ಹಾಗೂ ಬೆಳಗಾವಿಯ ಜೆಎನ್‌ಎಂಸಿ ವಿದ್ಯಾರ್ಥಿಗಳು `ಜೋಧಾ ಅಕ್ಬರ್~ ಚಿತ್ರದ ಅನುಕರಣೆಯ ಪ್ರದರ್ಶನಗಳು ಗಮನ ಸೆಳೆದವು. 
ಸುಡೊಕು, ರಸಪ್ರಶ್ನೆ ಮೊದಲಾದ ಸ್ಫರ್ಧೆಗಳಲ್ಲಿ ಕಿಮ್ಸನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದರು. ರಾತ್ರಿ ನಡೆದ `ಡೀಜೆ ನೈಟ್~ ಯುವ ಸಮೂಹವನ್ನು ಅಬ್ಬರದ ಸಂಗೀತದ ಅಲೆಯಲ್ಲಿ ತೇಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.