ADVERTISEMENT

ರಾಜ್ಯಮಟ್ಟದ ಹಸ್ತಪ್ರತಿ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 5:26 IST
Last Updated 5 ಫೆಬ್ರುವರಿ 2014, 5:26 IST
ಧಾರವಾಡದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಹಸ್ತಪ್ರತಿ ಸಮ್ಮೇಳನಕ್ಕೆ ಬಂದ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರಿಗೆ ತಿಲಕವಿಟ್ಟು ಸ್ವಾಗತಿಸಲಾಯಿತು. ಎಸ್‌.ಡಿ.ಎಂ. ಸೊಸೈಟಿ ಕಾರ್ಯದರ್ಶಿ ಜಿನೇಂದ್ರ ಪ್ರಸಾದ, ಜೆ.ಎಸ್‌.ಎಸ್‌.  ಡಾ.ಅಜಿತ ಪ್ರಸಾದ ಚಿತ್ರದಲ್ಲಿದ್ದಾರೆ.
ಧಾರವಾಡದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಹಸ್ತಪ್ರತಿ ಸಮ್ಮೇಳನಕ್ಕೆ ಬಂದ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರಿಗೆ ತಿಲಕವಿಟ್ಟು ಸ್ವಾಗತಿಸಲಾಯಿತು. ಎಸ್‌.ಡಿ.ಎಂ. ಸೊಸೈಟಿ ಕಾರ್ಯದರ್ಶಿ ಜಿನೇಂದ್ರ ಪ್ರಸಾದ, ಜೆ.ಎಸ್‌.ಎಸ್‌. ಡಾ.ಅಜಿತ ಪ್ರಸಾದ ಚಿತ್ರದಲ್ಲಿದ್ದಾರೆ.   

ಧಾರವಾಡ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಹಾಗೂ ಜೆಎಸ್‌ಎಸ್‌ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿರುವ ಎರಡು ದಿನಗಳ 10ನೇ ರಾಜ್ಯಮಟ್ಟದ ಹಸ್ತಪ್ರತಿ ಸಮ್ಮೇಳನ ಮಂಗಳವಾರ ಇಲ್ಲಿಯ ವಿದ್ಯಾಗಿರಿಯ ಜೆ.ಎಸ್.ಎಸ್‌. ಆವರಣದಲ್ಲಿಆರಂಭವಾಯಿತು.

‘ಜನಸಮುದಾಯಕ್ಕೆ ಒಂದು ಸಾಹಿತ್ಯವನ್ನು ತಲುಪಿಸುವ ಪ್ರಕ್ರಿಯೆಯನ್ನು ಪ್ರತೀಕರಣ ಎನ್ನಲಾಗುತ್ತದೆ. ಪ್ರತೀಕರಣವನ್ನು ಯಥಾವತ್ತಾಗಿ ಮಾಡುವ ಬದಲು ರಾಜ್ಯಯಂತ್ರ ತನಗೆ ಬೇಕಾದ ಸಂಗತಿ ಮಾತ್ರ ತಲುಪುವಂತೆ ನೋಡಿಕೊಳ್ಳುತ್ತದೆ. ಇದು ಅಪಾಯಕಾರಿ ಬೆಳವಣಿಗೆ. ರಾಜ್ಯಯಂತ್ರ ಅಷ್ಟೇ ಅಲ್ಲದೇ, ಧರ್ಮ, ಜಾತಿನಿಷ್ಠ ಮನಸ್ಸುಗಳು ಪ್ರತೀಕರಣ ಯಾರಿಗೆ ತಲುಪಬೇಕು, ಹೇಗೆ ತಲುಪಬೇಕು ಎಂಬುದನ್ನು ನೋಡಿಕೊಳ್ಳುತ್ತವೆ’ ಎಂದು ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದ ಹಿರಿಯ ವಿಮರ್ಶಕ ಡಾ.ಎಚ್‌.ಎಸ್‌.ರಾಘವೇಂದ್ರರಾವ್‌ ಹೇಳಿದರು.

‘ಕಿವಿಯಿಂದ ಕಿವಿಗೆ ತಲುಪುವ ಮೂಲಕ ನಮ್ಮ ಸಾಹಿತ್ಯ, ಸಂಸ್ಕೃತಿ, ಪರಂಪರೆ ರಕ್ಷಣೆಯಾಗುತ್ತಿತ್ತು. ಟಿ.ವಿ. ಬಂದ ಬಳಿಕ ಜನರು ಸಂಗತಿಗಳನ್ನು ನೋಡಲಾರಂಭಿಸಿದರು. ಕಿವಿಯಿಂದ ಕೇಳಿದ್ದನ್ನು ಅನುಮಾನ ಪಡುವುದು ಆಗ ಆರಂಭವಾಯಿತು. ಕಣ್ಣಿನಿಂದ ನೋಡಿದ್ದನ್ನು ನಂಬಲು ಶುರು ಮಾಡಿದರು. ಇದನ್ನೇ ಬಂಡವಾಳ ಮಾಡಿಕೊಂಡ ಟಿ.ವಿ. ಚಾನೆಲ್‌ಗಳು ಜನರ ಭಾವನೆಗಳೊಂದಿಗೆ ಆಟವಾಡಲು ಆರಂಭಿಸಿದವು’ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು. ಆದರೆ ಹಸ್ತಪ್ರತಿ ಸಂರಕ್ಷಣೆ ಮಾಡಲು ಕಂಪ್ಯೂಟರ್‌ ಬಳಕೆಯೂ ಅಷ್ಟೇ ಅಗತ್ಯವಾಗಿದೆ’ ಎಂದು ಅವರು ಪ್ರತಿಪಾದಿಸಿದರು.

ಹಂಪಿ ಕನ್ನಡ ವಿ.ವಿ. ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ, ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ,  ವಿರೂಪಾಕ್ಷಪ್ಪ ಸವಡಿ, ಡಾ.ಜಿನದತ್ತ ಹಡಗಲಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT