ಹುಬ್ಬಳ್ಳಿ: `ವಿಮಾನ ನಿಲ್ದಾಣ ವಿಸ್ತರಣೆಗಾಗಿ ಜಾಗ ತ್ಯಾಗ ಮಾಡಿ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿಕೊಡಲು ಸರ್ಕಾರ ಮುಂದಾಗಬೇಕು~ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ಅಧ್ಯಕ್ಷ ರಘೋತ್ತಮ ಎನ್. ಕುಲಕರ್ಣಿ ಆಗ್ರಹಿಸಿದರು.
ವಿಮಾನ ನಿಲ್ದಾಣ ವಿಸ್ತರಣೆಗಾಗಿ ಭೂಮಿ ಕಳೆದುಕೊಂಡ ನಿವೇಶನ ದಾರರಿಗೆ ನಿವೇಶನ ಹಾಗೂ ಅಕ್ರಮ ಸಕ್ರಮ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ವತಿಯಿಂದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
`ಭೂಮಿ ಕಳೆದುಕೊಂಡವರು ಕಳೆದ 5-6 ವರ್ಷಗಳಿಂದ ಅತಂತ್ರ ಪರಿಸ್ಥಿತಿಯಲ್ಲಿ ಜೀವನ ಕಳೆಯು ವಂತಾಗಿದೆ. ಈಗಾಗಲೇ ಭರವಸೆ ನೀಡಿ ದಂತೆ ಸಂತ್ರಸ್ತರಿಗೆ ಆದಷ್ಟು ಶೀಘ್ರ ನಿವೇಶನ ನೀಡಬೇಕು. ಅಕ್ರಮ ಸಕ್ರಮ ನಿವೇಶನದಾರರಿಗೂ ಆಶ್ರಯ ಯೋಜನೆ ಯಡಿ ಬಹುಮಹಡಿ ಕಟ್ಟಡ ನೀಡಬೇಕು. ಸಂತ್ರಸ್ತರು ಈವರೆಗೆ ಶಾಂತಿ ಸ್ವರೂಪ ದಿಂದ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಉಗ್ರವಾಗುವತಾಳುವ ಮೊದಲೇ ಜಿಲ್ಲಾ ಡಳಿತ ಎಚ್ಚೆತ್ತುಕೊಳ್ಳಬೇಕು~ ಎಂದರು.
`2008ರಲ್ಲಿ ನಿವೇಶನ ಹಾಗೂ ಕಟ್ಟಡ ಹೊಂದಿದವರಿಗೆ ನೀಡಿದ ಪರಿಹಾರಧನವನ್ನೇ 2011ರಲ್ಲೂ ನೀಡಲಾಗುತ್ತಿದೆ. ಕೆಲವರು ಹಳೆ ನಿವೇಶನದಲ್ಲೇ ವಾಸಿಸುತ್ತಿದ್ದಾರೆ. ನಿವೇಶನದಾರರಿಗೆ ನಿವೇಶನವನ್ನೇ ನೀಡಬೇಕು. 2007ರಲ್ಲಿ ಸ್ವಾಧೀನಪಡಿಸಿ ಕೊಂಡ ನಿವೇಶನಗಳಿಗೆ 2008ರಲ್ಲಿ ಪರಿಹಾರ ಧನ ನಿರ್ಧರಿಸಿ ಅದೇ ಹಣವನ್ನು 2011ರಲ್ಲಿ ವಿತರಿಸಿರುವುದು ಯಾವ ನ್ಯಾಯ~ ಎಂದು ಪ್ರಶ್ನಿಸಿದರು.
`ಸಕ್ರಮ ನಿವೇಶನದಾರರಿಗೆ ಪರಿ ಹಾರಧನ ವಿತರಣೆ ಮಾಡಿದ ನಂತರ ತಹಶೀಲ್ದಾರ್ ಮತ್ತು ಲೆಕ್ಕಾಧಿಕಾರಿಗಳ ಮೂಲಕ ಟಿ.ಡಿ.ಎಸ್. ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿ ಪಾವತಿಸುವಂತೆ ನೋಟಿಸ್ ಕಳುಹಿಸಲಾಗಿದೆ. ಅದನ್ನು ರದ್ದುಪಡಿಸಬೇಕು. ಸಂತ್ರಸ್ತರಿಗೆ ವಿಳಂಬವಾಗಿ ನೀಡಿದ ಹಣಕ್ಕೆ ಬಡ್ಡಿ ನೀಡದೆ, ಸರ್ಕಾರದ ಹಣಕ್ಕೆ ಸಂತ್ರಸ್ತರು ಬಡ್ಡಿ ಪಾವತಿಸಬೇಕೆನ್ನುವುದು ಯಾವ ನ್ಯಾಯ~ ಎಂದು ಅವರು ಪ್ರಶ್ನಿಸಿದರು.
`2008ರಲ್ಲಿ ಪರಿಹಾರ ವಿತರಣೆ ಸಂದರ್ಭದಲ್ಲಿ ಇದ್ದ ಕಟ್ಟಡ ಸಾಮಗ್ರಿ ಬೆಲೆ ಈಗ 5-6 ಪಟ್ಟು ಹೆಚ್ಚಿದೆ. ಆಗ ನಿರ್ಧರಿಸಿದ ಪರಿಹಾರಧನ ಮೊತ್ತವನ್ನೇ ಈಗಲೂ ನೀಡಿದರೆ ಸಂತ್ರಸ್ತರಿಗೆ ಅನ್ಯಾಯವಾಗುತ್ತದೆ. ಪರಿಹಾರಧನ ಹೆಚ್ಚಿಸಬೇಕು~ ಎಂದು ಆಗ್ರಹಿಸಿದರು.
ಸಂತ್ರಸ್ತರ ಒಕ್ಕೂಟದ ಎಸ್.ಎ. ಜಹಾಗೀರದಾರ, ಐ.ಬಿ. ಚಡಿಚಾಳ, ಎಂ.ಜಿ. ರಾಯ್ಕರ, ಜಿ. ಶಿರೂರ, ಆರ್.ಎಂ. ಅಣ್ವೆಕರ, ಬಿ.ಎಸ್. ಪಟ್ಟೇದ, ಆರ್.ಎಸ್.ಹಿರೇಮಠ, ಕೆ.ಬಿ. ಹೂಗಾರ, ಎಸ್.ಎಚ್. ಆನಂದಾಗಲ್ಲ ಮತ್ತಿತರರು ಇದ್ದರು. ಪ್ರತಿಭಟನಾ ಸಭೆಗೂ ಮೊದಲು ಗಾಜಿನ ಮನೆ ಆವರಣದಿಂದ ಚೆನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಸಂತ್ರಸ್ತರಿಂದ ಮೆರವಣಿಗೆ ನಡೆಯಿತು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.