ADVERTISEMENT

ವಿಶ್ವ ಬ್ಯಾಂಕ್ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 8:35 IST
Last Updated 8 ಫೆಬ್ರುವರಿ 2011, 8:35 IST

ಹುಬ್ಬಳ್ಳಿ: ಅವಳಿನಗರದ ಬಸ್ ನಿಲ್ದಾಣಗಳ ಅಭಿವೃದ್ಧಿಗೆ ಸಾಲ ನೀಡಿಕೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ವಿಶ್ವಬ್ಯಾಂಕ್ ಅಧಿಕಾರಿಗಳ ತಂಡ ಸೋಮವಾರ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿತು.ಹುಬ್ಬಳ್ಳಿ ಮತ್ತು ಧಾರವಾಡದ ನಗರ ಸಾರಿಗೆ ಬಸ್ ನಿಲ್ದಾಣಗಳ ಅಭಿವೃದ್ಧಿ, ಹುಬ್ಬಳ್ಳಿಯ ಹಳೆಯ ಬಸ್ ನಿಲ್ದಾಣದ ಅಭಿವೃದ್ಧಿ, ಎರಡು ಡಿಪೊಗಳ ಅಭಿವೃದ್ಧಿ ಹಾಗೂ ಮುನ್ನೂರು ಹೊಸ ಬಸ್‌ಗಳ ಖರೀದಿಗಾಗಿ ವಾಯವ್ಯ ಸಾರಿಗೆ ಸಂಸ್ಥೆಯು ವಿಶ್ವಬ್ಯಾಂಕ್ ನೆರವು ಕೋರಿದೆ.

‘ಅಭಿವೃದ್ಧಿಗಾಗಿ 146 ಕೋಟಿ ರೂಪಾಯಿಗಳ ಅಗತ್ಯವಿದೆ ಎಂಬುದಾಗಿ ಸಂಸ್ಥೆಯು ವಿಶ್ವಬ್ಯಾಂಕಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅಧ್ಯಯನಕ್ಕೆ ಆಗಮಿಸಿದ ಬ್ಯಾಂಕ್ ತಂಡ, ನಮ್ಮೊಂದಿಗೆ ವಿವರವಾಗಿ ಚರ್ಚಿಸಿದೆ. ಇನ್ನು ಮೂರು ತಿಂಗಳಲ್ಲಿ ನಮ್ಮ ಪ್ರಸ್ತಾವನೆಗೆ ಅನುಮೋದನೆ ದೊರೆಯುವ ಆಶಯ ಇದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ‘ಪ್ರಜಾವಾಣಿ’ಗೆ ತಿಳಿಸಿದರು.ವಿಶ್ವಬ್ಯಾಂಕ್ ಅಧಿಕಾರಿಗಳಾದ ಸ್ಯಾಮ್, ನೂಪುರ್ ಗುಪ್ತಾ, ಜೆ.ಪಿ.ಅಗರವಾಲ್, ವೆಂಕಟ್ ಮತ್ತಿತರರು ಅಧ್ಯಯನ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.