ADVERTISEMENT

ಶಿಕ್ಷಣ ಧೋರಣೆ:ಅಂತರರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:37 IST
Last Updated 4 ಏಪ್ರಿಲ್ 2013, 6:37 IST

ಧಾರವಾಡ: ನಗರದಲ್ಲಿ ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತ ಕೋತ್ತರ ಶಿಕ್ಷಣ ವಿಭಾಗ, ಡಾ. ಜಾಕೀರ್ ಹುಸೇನ್ ಅಧ್ಯಯನ ಕೇಂದ್ರ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಶಿಕ್ಷಣ ಮಹಾವಿದ್ಯಾಲಯಗಳ ಸಹ ಯೋಗಲ್ಲಿ `ಪ್ರಸ್ತುತ ಶಿಕ್ಷಕರ ಶಿಕ್ಷಣದ ಧೋರಣೆಗಳು' ಕುರಿತ ಅಂತರ ರಾಷ್ಟ್ರೀಯ ಸಮ್ಮೇಳನ ನಡೆಯಿತು.

ಅಮೆರಿಕದ ಓಸ್ಟರ್ ಸ್ಟೇಟ್ ಯುನಿವರ್ಸಿಟಿಯ ಡಾ. ಕ್ಲೇ.ಎಂ. ಸ್ಟಾರ್ಲಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ.ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಬಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳನಲ್ಲಿ ಮೂರು ವಿಚಾರ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಅಮೆರಿಕದ ಡಾ. ಸೂ ಪ್ಯಾನ್ ಫೂ, ಕೇರಳ ವಿಶ್ವವಿದ್ಯಾಲಯದ ಡಾ. ಗೀತಾ ಉಪನ್ಯಾಸ ನೀಡಿದರು.

ಅತಿಥಿಗಳಾಗಿ ಡಾ. ಜಿ.ಬಿ. ನಂದನ, ಡಾ. ಎ.ಎಚ್. ಚಚಡಿ ಹಾಗೂ ಡಾ.ಸಿ. ರಾಜಶೇಖರ  ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.