ADVERTISEMENT

ಸಚಿವ ಕಾಗೇರಿ ಪತ್ತೆಗೆ ಪೊಲೀಸರಿಗೆ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:25 IST
Last Updated 6 ಫೆಬ್ರುವರಿ 2012, 6:25 IST

ಧಾರವಾಡ: ಅನುದಾನ ಬಿಡುಗಡೆಗೆ ಆಗ್ರಹಿಸಿ ರಾಜ್ಯ ಅನುದಾನ ರಹಿತ ಶಾಲಾ- ಕಾಲೇಜುಗಳ ಶಿಕ್ಷಕರ, ನೌಕರರ ಹಾಗೂ ಆಡಳಿತ ಮಂಡಳಿಗಳ ಸಂಘದ ಸದಸ್ಯರು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯು ಕ್ತರ ಕಚೇರಿ ಎದುರು ನಡೆಸಿರುವ ಆಮರಣ ಉಪವಾಸ ಸತ್ಯಾಗ್ರಹ 13ನೇ ದಿನಕ್ಕೆ ಮುಂದುವರಿದಿದೆ.

ಹೋರಾಟದ ಬೆಂಬಲಾರ್ಥವಾಗಿ ವಸಂತ ಹೊರಟ್ಟಿ ನೇತೃತ್ವದಲ್ಲಿ ಜೆಡಿ ಎಸ್ ಕಾರ್ಯಕರ್ತರು ಹಾಗೂ ಶಿಕ್ಷಕ ರು ಮೆರವಣಿಗೆ ಮೂಲಕ ಉಪನಗರ ಪೊಲೀಸ್ ಠಾಣೆಗೆ ತೆರಳಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಣೆಯಾ ಗಿದ್ದಾರೆ. ಕೂಡಲೇ ಪತ್ತೆ ಹಚ್ಚಬೇಕು ಎಂದು ದೂರು ಸಲ್ಲಿಸಿದರು.

ಆಮರಣ ಉಪವಾಸ ಸತ್ಯಾಗ್ರಹ ನಡೆಸಿದ್ದ ಚೆನ್ನಮ್ಮ ಕಾತರಕಿ ಹಾಗೂ ಅನ್ನಪೂರ್ಣ ಸೊನ್ನದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕಳೆದ 53 ದಿನಗಳಿಂದ ಮುಷ್ಕರ ನಡೆಸಿದ್ದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ (ಫೆ.6) ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯು ಕ್ತರ ಕಚೇರಿಯ ಕಸಗೂಡಿಸುವ ಮೂ ಲಕ ಪ್ರತಿಭಟನೆ ನಡೆಸಲಾಗುವುದು. ಫೆ. 8 ರೊಳಗೆ ಅನುದಾನ ಬಿಡುಗಡೆ ಕುರಿತು ಆದೇಶ ಹೊರಡಿಸದಿದ್ದರೆ ಎಲ್ಲ ಶಿಕ್ಷಕರು ಸಾಮೂಹಿಕ ಆಆಮರಣ ಉಪವಾಸ ಆರಂಭಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾ ರೆ.

ಮಲ್ಲಿಕಾರ್ಜುನ ಮಸಳಿ, ಎಸ್.ಜೆ. ಪ್ರವೀಣಕುಮಾರ ಆಮರಣ ಉಪ ವಾಸ ಮುಂದುವರಿಸಿದ್ದಾರೆ. ಇಂದು ಮಹಾಂತೇಶ ಹಾಗೂ ಬಸವರಾಜ ಅವರು ಆಮರಣ ಉಪವಾಸ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.