ADVERTISEMENT

ಸೂಪರ್ ಮಾರ್ಕೆಟ್ ಸ್ವಚ್ಛತೆಗೆ ಸಹಕಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 5:30 IST
Last Updated 18 ಅಕ್ಟೋಬರ್ 2011, 5:30 IST

ಧಾರವಾಡ: `ಮೇಯರ್ ನೇತೃತ್ವದಲ್ಲಿಯೇ ಸೂಪರ್ ಮಾರ್ಕೆಟ್ ಸ್ವಚ್ಛತಾ ಕಾರ್ಯ ನಡೆ ಯಲಿ. ನಾವೆಲ್ಲರೂ ಅವರಿಗೆ ಸಹಕರಿಸಲಿದ್ದೇವೆ. ಸ್ವಚ್ಛತಾ ಕಾರ್ಯಕ್ಕೂ ಮುನ್ನ ನಗರದ ಪಾಲಿಕೆ ಸದಸ್ಯರು, ಪ್ರತಿಪಕ್ಷದ ನಾಯಕರು, ವ್ಯಾಪಾರಸ್ಥ ರೊಂದಿಗೆ ಮೇಯರ್ ಸಭೆ ನಡೆಸಬೇಕು~ ಎಂದು ಜಾತ್ಯತೀತ ಜನತಾದಳದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತಮಾಟಗಾರ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಮೇಯರ್ ಅವರು ಮಾರುಕಟ್ಟೆ ಸ್ವಚ್ಛ ಗೊಳಿಸಬೇಕು. ದೀಪಾವಳಿ ಹಬ್ಬದ ನಂತರ ಈ ಕಾರ್ಯ ನಡೆಸಬೇಕು. ಮೇಯರ್ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಸ್ವಚ್ಛತಾ ಕಾರ್ಯಕ್ಕೆ ನಾವು ಅಡ್ಡಿಪಡಿಸಿಲ್ಲ. ಆದರೆ ನಸುಕಿನ ಜಾವ ಪೊಲೀಸ್ ಬಲದೊಂದಿಗೆ ಆಗಮಿಸಿ ತೆರವು ಕಾರ್ಯಾಚರಣೆಗೆ ಮುಂದಾ ಗಿದ್ದುದನ್ನು ವಿರೋಧಿಸಿದ್ದೇವೆ. ಸ್ವಚ್ಛತಾ ನೆಪದಲ್ಲಿ ಬಿಜೆಪಿಯವರು ದ್ವೇಷದ ರಾಜಕಾರಣ ಮಾಡು ತ್ತಿದ್ದಾರೆ ಎಂದು ಆಪಾದಿಸಿದ ಅವರು, ಪೊಲೀಸ್ ಬಲದದಿಂದ ಮಾರುಕಟ್ಟೆಯಲ್ಲಿ ಆತಂಕದ ವಾತಾ ವರಣ ಸೃಷ್ಟಿಮಾಡಿದ್ದಾರೆ ಎಂದರು.

ಇಡೀ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಬೇಕು. ಕೇವಲ ಚರಂಡಿ ಮಾತ್ರವಲ್ಲ. ಚರಡಿಂಗಳ ಅತಿಕ್ರ ಮಣ ಮಾಡಿ ಅಂಗಡಿ ಕಟ್ಟಲಾಗಿದೆ ಎಂದು ಹೇಳ ಲಾಗುತ್ತಿದೆ. ಇಂಥ ಅಂಗಡಿಕಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಲಿ. ಈ ಅಂಗಡಿಕಾರರ ಸಲಹೆ- ಸೂಚನೆಗಳನ್ನು ಸಹ ಪಡೆಯಬೇಕು ಎಂದ ಅವರು, ಮಾರುಕಟ್ಟೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

`ಸೂಪರ್ ಮಾರುಕಟ್ಟೆಯಲ್ಲಿ ನಾವು ಕಳೆದ 30 ವರ್ಷಗಳಿಂದ ವ್ಯಾಪಾರ ವಹಿವಾಟು ನಡೆ ಸುತ್ತಿದ್ದೇವೆ. ನನ್ನ ತಂದೆಯವರ ಹೆಸರಿನಲ್ಲಿ ಎರಡು ಅಂಗಡಿಗಳಿವೆ. ಆಲ್ಲಿ ಕುಡಿ ಯುವ ನೀರಿನ ಟ್ಯಾಂಕ್ ನಿರ್ಮಿಸುವುದಾದರೆ ಅಂಗಡಿಗಳನ್ನು ಪಾಲಿಕೆಗೆ  ನೀಡುತ್ತೇನೆ~ ಎಂದು ತಮಟಗಾರ ತಿಳಿಸಿದರು.

ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಎನ್.ಎಚ್.ಕೋನರಡ್ಡಿ, ವಿಜಯಲಕ್ಷ್ಮೀ ಲೂತಿಮಠ, ಸರೋಜಾ ಪಾಟೀಲ, ಸುರೇಶ ಹಿರೇಮಠ, ಇಸಾಕ್ ತಮಾಟಗಾರ ಮತ್ತಿತರರು ಪತ್ರಿಕಾಗೋಷ್ಠಿ ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.