ADVERTISEMENT

ಸೆಂಟ್ರಲ್ ಜೈಲಿನಲ್ಲಿ ಮೊಬೈಲ್‌, ಹಣ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 8:13 IST
Last Updated 21 ಏಪ್ರಿಲ್ 2018, 8:13 IST

ಧಾರವಾಡ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ  ಮೊಬೈಲ್, ಗಾಂಜಾ ಸೇರಿದಂತೆ ಮಾದಕವಸ್ತು ಹೊಂದಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಉಪ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಯಿತು.

ದಾಳಿ ಸಂದರ್ಭದಲ್ಲಿ ಕಾರಾಗೃಹದಲ್ಲಿ 6 ಮೊಬೈಲ್ ಹಾಗೂ ₹9,000 ನಗದು ಪತ್ತೆಯಾಗಿದೆ. ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡದೇ ದಿಢೀರ್ ದಾಳಿ ನಡೆಸಿದ್ದರಿಂದ ಕೆಲ ಕಾಲ ಜೈಲು ಸಿಬ್ಬಂದಿ ತಬ್ಬಿಬ್ಬಾದರು.

ಜೈಲಿನಲ್ಲಿ ದೊರೆತಿರುವ ಕೆಲವು ಮೊಬೈಲ್, ಹಣ ಹಾಗೂ ಇತರ ವಸ್ತುಗಳು ಯಾರಿಗೆ ಸೇರಿವೆ. ಒಳಗಡೆ ಹೇಗೆ ತೆಗೆದುಕೊಂಡು ಹೋಗಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಿದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿಪಿ ರೇಣುಕಾ ಸುಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.