ADVERTISEMENT

ಹುಬ್ಬಳ್ಳಿ ಹಬ್ಬದ ಝಲಕ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 8:50 IST
Last Updated 3 ನವೆಂಬರ್ 2012, 8:50 IST

ಹುಬ್ಬಳ್ಳಿ: ಕತ್ತಲೆಯನ್ನು ಸೀಳಿ ಬೆಳಗು ತ್ತಿದ್ದ ದೀಪಗಳ ಕೆಳಗೆ ಕುಣಿಯುತ್ತ, ಕುಣಿಸುತ್ತ ಹಾಡುತ್ತಿದ್ದ ಕಲಾವಿದರು.  ಕಿವಿ ತುಂಬುವ ಅಬ್ಬರದ ಸಂಗೀತ, ಸಿಳ್ಳೆ ಚಪ್ಪಾಳೆಗಳೊಂದಿಗೆ ಕತ್ತು ಕುಣಿಸುತ್ತ ಸಾಥ್ ನೀಡಿದ ಪ್ರೇಕ್ಷಕರು... ಅರ್ಬನ್ ಓಯಸಿಸ್ ಮಾಲ್‌ನಲ್ಲಿ ಶುಕ್ರವಾರ ಸಂಜೆ ಮಾಯಾಲೋಕವೊಂದು ಸೃಷ್ಟಿ ಯಾಗಿತ್ತು.

`ಹುಬ್ಬಳ್ಳಿ ಹಬ್ಬ~ದ ಎರಡನೇ ದಿನದಂದು ಗೋವಾದ ಸಿಂಡಿಕೇಟ್ ಬ್ಯಾಂಡ್‌ನ ಕಲಾವಿದರು ನಡೆಸಿಕೊಟ್ಟ ಸಂಗೀತ ರಸಸಂಜೆ ಯುವ ಮನಸ್ಸು ಗಳನ್ನು ಸೂರೆಗೊಂಡಿತು, ಹುಚ್ಚೆದ್ದು ಕುಣಿಸಿತು. ಹಿಂದಿಯ ದಮ್ ಮಾರೋ ದಮ್, ಬಚ್‌ನ ಏ ಹಸಿನೋ, ಇಂಗ್ಲಿಷ್‌ನ ವಕಾ ವಕಾ, ವೆಲ್‌ಕಮ್ ಟು ಹೋಟೆಲ್ ಕ್ಯಾಲಿಫೋರ್ನಿಯಾ ಸಹಿತ ಹತ್ತಾರು ಗೀತೆಗಳು ಕಾರ್ಯಕ್ರಮದಲ್ಲಿ ಮೂಡಿ ಬಂದವು.

ನಾಲಿಗೆಗೂ ಹಬ್ಬ: ಮಾಲ್‌ನ ಒಳಗೆ ಆಹಾರ ಮೇಳದಲ್ಲಿ ನಾನಾ ಖಾದ್ಯಗಳು ಜನರ ರುಚಿ ತಣಿಸಿದವು. ನೂಡಲ್ಸ್, ವಡಾಪಾವ್, ಚಿಕನ್ ಲಾಲಿಪಪ್, ಬೆಣ್ಣೆ ದೋಸೆ ಮೊದಲಾದ ತಿನಿಸುಗಳನ್ನು ನೂರಾರು ಮಂದಿ ಕೊಂಡು ಸವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.