ADVERTISEMENT

`ಹು-ಧಾ ಅಭಿವೃದ್ಧಿಗೆ ಶ್ರಮಿಸಿ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 5:27 IST
Last Updated 5 ಏಪ್ರಿಲ್ 2013, 5:27 IST

ಹುಬ್ಬಳ್ಳಿ: `ಅವಳಿನಗರ ಅಭಿವೃದ್ಧಿಗಾಗಿ ಪಾಲಿಕೆ ಸದಸ್ಯರು ಶ್ರಮಿಸಬೇಕು' ಎಂದು ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಸಲಹೆ ಮಾಡಿದರು.
ಭೈರಿದೇವರಕೊಪ್ಪ ಗ್ರಾಮದ ಮಲ್ಲನಗೌಡ ಬಡಾವಣೆಯಲ್ಲಿ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

`ರಾಜ್ಯ ಹಾಗೂ ಕೇಂದ್ರ ಸರರ್ಕಾರಗಳು ನಗರಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳ ಬೇಕು ಹಾಗೂ ಕೇಂದ್ರ ಸರ್ಕಾರದ ಹೌಸಿಂಗ್ ಸಿಸ್ಟೆಮ್ ಯೋಜನೆ ಬಳಸಿ ಕೊಂಡು ಮಹಾನಗರ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಶ್ರಮಿಸಬೇಕು' ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, `ಜನರಿಂದಲೇ ನನ್ನ ರಾಜಕೀಯ ಶಕ್ತಿ ದಯಪಾಲಿಸಿದ ನೀವೇ ನನ್ನ ದೇವರು. ಅಭಿವೃದ್ಧಿ ಕೆಲಸಕ್ಕೆ ಪ್ರಥಮ ಆದ್ಯತೆ ನೀಡುವು ದಲ್ಲದೆ, ನನ್ನ ಅವಧಿಯಲ್ಲಿ ಒಳಚರಂಡಿ ವ್ಯವಸ್ಥೆ ಪೂರ್ಣಗೊಳಿಸುತ್ತೇನೆ. ಈಗಾಗಲೇ ಈ ಪ್ರದೇಶದಲ್ಲಿ ಮಲಪ್ರಭಾ ಕುಡಿಯುವ ನೀರಿನ ಯೋಜನೆ ಕಲ್ಪಿಸಲಾಗಿದೆ. ಸಂಪೂರ್ಣ ವಾರ್ಡ್ ಅಭಿವೃದ್ಧಿ ಗೊಳಿಸುತ್ತೇನೆ' ಎಂದು ಭರವಸೆ ನೀಡಿದರು.

ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ, ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಹೊರಕೇರಿ, ಸುಧಾ ಮಣಿಕುಂಟ್ಲಾ ಅವರನ್ನು ಮಲ್ಲನಗೌಡ ಬಡಾವಣೆ ಸಾರ್ವಜನಿ ಕರು ಸತ್ಕರಿಸಿದರು.  ದೇವರಾಜ ಮಣಿ ಕುಂಟ್ಲಾ, ಲಾಲ್‌ಸಾಬ್ ಇಮಾರತ ವಾಲೇ, ಶಂಕರಗೌಡ ಪಾಟೀಲ, ಶಬ್ಬೀರ್ ಲಿಂಬುವಾಲೇ, ಶಾರದಾ ಪಾಟೀಲ, ಅಕ್ಬರ್ ಬೆಳಗಾಂವಕರ, ಶೌಕತ್‌ಲಿ ನದಾಫ, ಮಿಶ್ರಿಕೋಟಿ, ಮಲ್ಲಿ ಕಾರ್ಜುನ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.