ADVERTISEMENT

ಹುಬ್ಬಳ್ಳಿ: 100 ಕೋಟಿ ಡೋಸ್ ಲಸಿಕೆ, ಸಂಭ್ರಮಕ್ಕೆ ಕಿಮ್ಸ್ ಸಜ್ಜು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 4:24 IST
Last Updated 22 ಅಕ್ಟೋಬರ್ 2021, 4:24 IST
   

ಹುಬ್ಬಳ್ಳಿ: ಭಾರತದಲ್ಲಿ 100 ಕೋಟಿ‌ ಡೋಸ್ ಕೋವಿಡ್ ಲಸಿಕೆ ಹಾಕಿರುವ ಹಿನ್ನೆಲೆಯಲ್ಲಿ, ಇದರ ಸಂಭ್ರಮಾಚರಣೆಗೆ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸಜ್ಜಾಗಿದೆ.

ವಾಹನದ ಮೇಲೆ 100 ಕೋಟಿ ಲಸಿಕಾಕರಣ ಎಂದು ಬರೆಯಲಾಗಿದೆ. ಕಿಮ್ಸ್ ಆಡಳಿತ ಕಚೇರಿಯನ್ನು ಬಲೂನ್ ಗಳಿಂದ ಅಲಂಕರಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಕಿಮ್ಸ್ ಶುಶ್ರೂಷಕರನ್ನು ಸನ್ಮಾನಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.