ADVERTISEMENT

ಹುಬ್ಬಳ್ಳಿ: ರಾಷ್ಟ್ರಮಟ್ಟಕ್ಕೆ 11 ಶೂಟರ್‌ಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 4:33 IST
Last Updated 12 ಅಕ್ಟೋಬರ್ 2022, 4:33 IST
ದಕ್ಷಿಣ ವಲಯ ಶೂಟಿಂಗ್‌ (ಪಿಸ್ತೂಲ್‌) ಚಾಂಪಿಯನ್‌ಷಿಪ್‌ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟದ ಶೂಟಿಂಗ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಹುಬ್ಬಳ್ಳಿಯ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಸ್ಪರ್ಧಿಗಳು
ದಕ್ಷಿಣ ವಲಯ ಶೂಟಿಂಗ್‌ (ಪಿಸ್ತೂಲ್‌) ಚಾಂಪಿಯನ್‌ಷಿಪ್‌ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟದ ಶೂಟಿಂಗ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಹುಬ್ಬಳ್ಳಿಯ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಸ್ಪರ್ಧಿಗಳು   

ಹುಬ್ಬಳ್ಳಿ: ಕೇರಳದ ತಿರುವನಂತಪುರದಲ್ಲಿ ಇತ್ತೀಗೆ ನಡೆದ ದಕ್ಷಿಣ ವಲಯ ಶೂಟಿಂಗ್‌ (ಪಿಸ್ತೂಲ್‌) ಚಾಂಪಿಯನ್‌ಷಿಪ್‌ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ 11 ಮಂದಿ ರಾಷ್ಟ್ರಮಟ್ಟದ ಶೂಟಿಂಗ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಸಮೀಕ್ಷಾ ಶೆಟ್ಟಿ ಅವರು ಯೂತ್‌ ವಿಭಾಗದಲ್ಲಿ ಬೆಳ್ಳಿ ಮತ್ತು ಸಬ್‌ ಯೂತ್‌ ವಿಭಾದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಜಯಶ್ರೀ ಪಾಟೀಲ ಅವರು, ಮಾಸ್ಟರ್‌ ವಿಭಾದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಇವರೊಂದಿಗೆ ಕೀರ್ತಿ ಬಾಲೇಹೊಸೂರ, ಜಾಕೋಬ್‌ ಲಿಂಕನ್‌ ಹಾಗೂ ರಾಘವೇಂದ್ರ ಇಂಡಿ ಅವರು ನವೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಶೂಟಿಂಗ್‌ (ಪಿಸ್ತೂಲ್‌) ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಅದೇ ರೀತಿ, ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿ ನಡೆದ ದಕ್ಷಿಣ ವಲಯ ಶೂಟಿಂಗ್‌ (ರೈಫಲ್‌) ಚಾಂಪಿಯನ್‌ಷಿಪ್‌ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶ ನೀಡಿದ ಹುಬ್ಬಳ್ಳಿಯ ಅಭಯ್‌ ಗಣರಾಜ, ಶ್ರೇಯಾ ದೇಶಪಾಂಡೆ, ಶಶಾಂಕ ದಳವಿ, ಶ್ರೀಕರ್ ಸಬ್ನಿಸ್‌, ಆದರ್ಶ ನಿಕಂ ಹಾಗೂ ವಿನಯ್‌ ಎಲ್‌. ಕೂಡ ರಾಷ್ಟ್ರೀಯ ಶೂಟಿಂಗ್‌ (ರೈಫಲ್) ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಎರಡೂ ಪಂದ್ಯಾವಳಿಗಳಿಗೆ ರವಿಚಂದ್ರ ಬಾಲೇಹೊಸೂರ ಅವರು ವ್ಯವಸ್ಥಾಪಕರಾಗಿ ಕರ್ನಾಟಕ ತಂಡದ ನೇತೃತ್ವ ವಹಿಸಿದ್ದರು ಎಂದು ಶಿವಾನಂದ ಬಾಲೇಹೊಸೂರ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.