ಧಾರವಾಡ: ಪ್ರತಿಭಟನೆ ಸಂದರ್ಭದಲ್ಲಿ ಡಿಸಿಪಿ ಸಹಿತ ಪೊಲೀಸರನ್ನು ತಳ್ಳಿ, ನೂಕಿದ್ದ ಇಬ್ಬರು ಪಿಎಫ್ಐ ಕಾರ್ಯಕರ್ತರನ್ನು ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಜಿಲ್ಲಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಧ್ಯಾಹ್ನ ಓಣಿಯ ಸಿಕಂದರ್ ಮುಕ್ತುಂ ಸಾಬ್ ಶಾಲಗಾರ್ (27) ಹಾಗೂ ಫಾರೂಕ್ ಉಮರ್ ಮೆಹಬೂಬ್ ಸಾಬ್ ಕುಂಬಿ (24) ಬಂಧಿತ ಆರೋಪಿಗಳು. ಈ ಇಬ್ಬರು ಕ್ರಮವಾಗಿ ವೆಲ್ಡಿಂಗ್ ಹಾಗೂ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ಕಾರ್ಯಕರ್ತರನ್ನು ಬಂಧಿಸಿದ್ದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಈ ಇಬ್ಬರು ಪಾಲ್ಗೊಂಡಿದ್ದರು. ಅಲ್ಲಿ ಪೊಲೀಸ್ ಅಧಿಕಾರಿಗಳನ್ನು ತಳ್ಳಿ, ಗಲಾಟೆ ಗೆ ಪ್ರಚೋದಿಸಿದ್ದರು. ಈ ಇಬ್ಬರನ್ನು ಬಂಧಿಸುವಂತೆ ಕಮರಿಪೇಟೆ ಪೋಲಿಸರು ಜಿಲ್ಲಾ ಪೊಲೀಸರನ್ನು ಕೇಳಿದ್ದರು. ಅದರಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.