ADVERTISEMENT

ಇಂದಿರಾ ಕ್ಯಾಂಟೀನ್‌ಗೆ ಮರಗಳ ತೆರವು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 10:05 IST
Last Updated 9 ಫೆಬ್ರುವರಿ 2018, 10:05 IST
ಧಾರವಾಡ ಕಲಾಭವನದ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ತೆರವುಗಳಿಸಲಾಗಿರುವ ಮರ(ಎಡಚಿತ್ರ), ಮರಗಳನ್ನು ಟ್ಯ್ರಾಕ್ಟರ್‌ನಲ್ಲಿ ಸಾಗಿಸುತ್ತಿರುವುದು
ಧಾರವಾಡ ಕಲಾಭವನದ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ತೆರವುಗಳಿಸಲಾಗಿರುವ ಮರ(ಎಡಚಿತ್ರ), ಮರಗಳನ್ನು ಟ್ಯ್ರಾಕ್ಟರ್‌ನಲ್ಲಿ ಸಾಗಿಸುತ್ತಿರುವುದು   

ಧಾರವಾಡ: ಇಲ್ಲಿನ ಕಲಾಭವನದ ಆವರಣದಲ್ಲಿ ನಾಲ್ಕೈದು ದಶಕಗಳಿಂದ ಬೆಳೆದು ನಿಂತ ಹೆಮ್ಮರಗಳನ್ನು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಗುರುವಾರ ರಾತ್ರಿ ಧರೆಗರುಳಿಸಲಾಯಿತು.

ಜೆಸಿಬಿ ಸಹಾಯದಿಂದ ಮರಗಳನ್ನು ತೆರವು ಗೊಳಿಸಲು ಮುಂದಾದಾಗ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದಾಗ ಜೆಸಿಬಿ ಹಾಗೂ ಎರಡು ಟ್ರ್ಯಾಕ್ಟರ್‌ಗಳನ್ನು ಕಲಾಭವನದ ಆವರಣದಲ್ಲಿಯೇ ಬಿಟ್ಟು ಚಾಲಕರು ಪರಾರಿಯಾಗಿದ್ದಾರೆ.

ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಗಿರಿತಮ್ಮಣ್ಣವರ, ಜೆಸಿಬಿ ಹಾಗೂ  ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.