ADVERTISEMENT

59 ನೈರುತ್ಯ ರೈಲ್ವೆ ಸಿಬ್ಬಂದಿಗೆ ‘ಸುರಕ್ಷತಾ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 6:19 IST
Last Updated 26 ಆಗಸ್ಟ್ 2025, 6:19 IST
ರೈಲ್ವೆ ಸುರಕ್ಷತೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ರೈಲ್ವೆ ಸಿಬ್ಬಂದಿಗೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ‘ಸುರಕ್ಷತಾ ಪ್ರಶಸ್ತಿ’ ನೀಡಲಾಯಿತು
ರೈಲ್ವೆ ಸುರಕ್ಷತೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ರೈಲ್ವೆ ಸಿಬ್ಬಂದಿಗೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ‘ಸುರಕ್ಷತಾ ಪ್ರಶಸ್ತಿ’ ನೀಡಲಾಯಿತು   

ಹುಬ್ಬಳ್ಳಿ: ರೈಲ್ವೆ ಸುರಕ್ಷತೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ 59 ಸಿಬ್ಬಂದಿಗೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ಇಲ್ಲಿನ ರೈಲ್ವೆ ಆಫೀಸರ್ಸ್ ಕ್ಲಬ್‌ನಲ್ಲಿ ‘ಸುರಕ್ಷತಾ ಪ್ರಶಸ್ತಿ’ ನೀಡಲಾಯಿತು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರೇಮಚಂದ್ರ ಹರಿಜನ್, ‘ಸುರಕ್ಷತೆಯೇ ರೈಲ್ವೆ ಸೇವೆಯ ಮೂಲ ಆಧಾರವಾಗಿದೆ. ಸಿಬ್ಬಂದಿಯು ಶಿಸ್ತು, ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡಬೇಕು. ಪ್ರಶಸ್ತಿ ಪುರಸ್ಕೃತರ ಪರಿಶ್ರಮ, ಪ್ರಾಮಾಣಿಕತೆ ಇತರರಿಗೂ ಸ್ಫೂರ್ತಿಯಾಗಲಿ’ ಎಂದರು.

ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ತ್ರಿನೇತ್ರ ಕೆ.ಆರ್., ಇತರ ಶಾಖೆಗಳ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.