ADVERTISEMENT

ಸಂಸ್ಥೆ ಹೆಸರು ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 10:47 IST
Last Updated 16 ಜುಲೈ 2019, 10:47 IST

ಹುಬ್ಬಳ್ಳಿ: ನಮ್ಮ ಸಂಸ್ಥೆಯಲ್ಲಿ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದ ಸುನೀಲ ರಾಠೋಡ ಎಂಬುವರು ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಬ್ರಾಂಡ್‌ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ‘ಸ್ಮಾರ್ಟ್‌ ಸಿಟಿ ಇವೆಂಟ್ಸ್‌ ಹುಬ್ಬಳ್ಳಿ ಫ್ಯಾಷನ್‌ ವೀಕ್’ ಮಾಲೀಕ ಜೆ.ಪಿ. ಅಭಿಷೇಕ ಆರೋಪಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘2014ರಲ್ಲಿ ಆರಂಭವಾದ ಹುಬ್ಬಳ್ಳಿ ಫ್ಯಾಷನ್‌ ವೀಕ್‌ ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಆಗ ಸಂಸ್ಥೆಯಲ್ಲಿದ್ದ ಸುನೀಲ ಈಗ ಪ್ರತ್ಯೇಕವಾಗಿ ಫ್ಯಾಷನ್‌ ವೀಕ್‌ ಮಾಡಲು ಮುಂದಾಗಿದ್ದಾರೆ. ಸಂಸ್ಥೆಯ ಫೇಸ್‌ಬುಕ್‌ ಮತ್ತು ಇನ್‌ಸ್ಟ್ರಾಗ್ರಾಂನ ಪಾಸ್‌ವರ್ಡ್‌ಗಳನ್ನು ಹ್ಯಾಕ್‌ ಮಾಡಿದ್ದಾರೆ’ ಎಂದು ದೂರಿದರು.

‘ಎರಡು ತಿಂಗಳ ಹಿಂದೆ ಸುನೀಲ ಜೊತೆ ಮಾತನಾಡಿ ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಸಂಸ್ಥೆಯ ಖಾತೆ ಬಳಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದೆವು. ಆದರೆ, ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಪೊಲೀಸರಿಗೆ ದೂರು ನೀಡಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.