ADVERTISEMENT

ವಾಸ್ತುತಜ್ಞ ಚಂದ್ರಶೇಖರ ಗುರೂಜಿ‌‌ ಕೊಲೆ: ಆರೋಪಿಗಳಿಗೆ 6 ದಿನ‌ ಪೊಲೀಸ್ ಕಸ್ಟಡಿ

ವಾಸ್ತುತಜ್ಞ ಚಂದ್ರಶೇಖರ ಗುರೂಜಿ‌ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 12:52 IST
Last Updated 12 ಜುಲೈ 2022, 12:52 IST
   

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ‌ ಕೊಲೆ ಪ್ರಕರಣದ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡನನ್ನು ಮಂಗಳವಾರ ಮತ್ತೆ 6 ದಿನಗಳ ಕಾಲ‌ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ವಿದ್ಯಾನಗರ ಠಾಣೆ ಪೊಲೀಸರು ನಗರದ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಹದಿನೈದು ದಿನ ಪೊಲೀಸ್ ವಶಕ್ಕೆ ನೀಡಬೇಕು ಎಂದು ಪ್ರಕರಣದ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ಮತ್ತು ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿಶ್ವನಾಥ ಚೌಗಲೆ ನೇತೃತ್ವದ ತಂಡ ಕೋರಿತು.

ಪೊಲೀಸರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶರು, "ಕಸ್ಟಡಿಯಲ್ಲಿ ಪೊಲೀಸರು ನಿಮಗೆ ತೊಂದರೆ ಕೊಟ್ಟಿದ್ದಾರೆಯೇ" ಎಂದು‌ ಆರೋಪಿಗಳನ್ನು ಕೇಳಿದರು‌. ಅದಕ್ಕೆ ಆರೋಪಿಗಳು "ಇಲ್ಲ" ಎಂದು‌ ಪ್ರತಿಕ್ರಿಯಿಸಿದರು. ನಂತರ ಹದಿನೈದು ದಿನಗಳ ಬದಲಿಗೆ ಜುಲೈ 18ರವರೆಗೆ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿಆದೇಶ ನೀಡಿದರು.

ADVERTISEMENT

ನಂತರ ಪೊಲೀಸರು, ಆರೋಪಿಗಳನ್ನು ಕರೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.