ADVERTISEMENT

ಆದಿಶಕ್ತಿ‌ ದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:23 IST
Last Updated 12 ಏಪ್ರಿಲ್ 2025, 15:23 IST
ನವಲಗುಂದ ವಿಧಾನಸಭಾ ಕ್ಷೇತ್ರದ ತುಪ್ಪದಕುರಹಟ್ಟಿ ಗ್ರಾಮದ ಆದಿಶಕ್ತಿ‌ ದೇವಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ದಂಪತಿಯನ್ನು ಅಭಿನಂದಿಸಲಾಯಿತು
ನವಲಗುಂದ ವಿಧಾನಸಭಾ ಕ್ಷೇತ್ರದ ತುಪ್ಪದಕುರಹಟ್ಟಿ ಗ್ರಾಮದ ಆದಿಶಕ್ತಿ‌ ದೇವಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ದಂಪತಿಯನ್ನು ಅಭಿನಂದಿಸಲಾಯಿತು   

ನವಲಗುಂದ: ವಿಧಾನಸಭಾ ಕ್ಷೇತ್ರದ ತುಪ್ಪದಕುರಹಟ್ಟಿ ಗ್ರಾಮದ ಆದಿಶಕ್ತಿ‌ ದೇವಿಯ ಜಾತ್ರಾ ಮಹೋತ್ಸವ ಹಾಗೂ ಗುರು ಸಂಗಮೇಶ್ವರ ‌ಶಿವಾಚಾರ್ಯರ ಗುರು‌‌ನಮನ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಗ್ರಾಮದ ಭೂಸನೂರ ಮಠದ ವಾಗೀಶ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಹಾಂತಪ್ರಭು ಸ್ವಾಮೀಜಿ, ಸಿದ್ಧವೀರ ಶಿವಯೋಗಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಆದಿಶಕ್ತಿ ದೇವಿಯ ಪುರಾಣ ಮಂಗಲೋತ್ಸವ ನಡೆಯಿತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಅವರು ಕುಟುಂಬಸಮೇರತಾಗಿ ಬಂದು ದೇವಿಗೆ ಉಡಿ ತುಂಬಿ ಆಶೀರ್ವಾದ ಪಡೆದರು.

ADVERTISEMENT

ಅಣ್ಣಿಗೇರಿ ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಪಿ.ಎಸ್.ಐ ‌ಸಿದ್ಧಾರೂಡ ಆಲದಕಟ್ಟಿ, ಎಇಇ‌ ಮನೋಜಕುಮಾರ ಶಿಂಧೆ, ಎಇ ಎಸ್.ಎಸ್. ಲಂಗೂಟಿ,‌ ನವಲಗುಂದ ಪುರಸಭೆ ಅಧ್ಯಕ್ಷರು ‌ಶಿವಾನಂದ ತಡಸಿ, ಎಂಜಿನಿಯರ್ ಎಸ್.ಎ. ಕಾಳಗಿ, ಮುಖಂಡರಾದ ಷಣ್ಮುಖ ಗುರಿಕಾರ, ಸಿದ್ದನಗೌಡ ಪಾಟೀಲ್, ಗಂಗಪ್ಪ ಮನಮಿ, ಜೆ.ಡಿ. ಪಾಟೀಲ, ಪಿ.ಆರ್. ಭೂಸನೂರಮಠ, ಬಿ.ಎಚ್. ಗಾಣಿಗೇರ, ಎ.ಎಸ್. ಬಡೆಖಾನವರ, ಜೀವನ‌ ಪವಾರ, ಅರುಣಕುಮಾರ ಮಜ್ಜಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.