ADVERTISEMENT

ಶರಣರ ಮಾರ್ಗದಲ್ಲಿ ನಡೆದರೆ ಜೀವನ ಪಾವನ: ಬಸವಾಶ್ರಮದ ಅಕ್ಕಮಹಾದೇವಿ ಮಾತಾಜಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:20 IST
Last Updated 10 ಆಗಸ್ಟ್ 2025, 3:20 IST
ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಅನುಭವ ಮಂಟಪದಲ್ಲಿ ಬಸವ ತತ್ವ ಲಿಂಗಾನುಭಾವಿ ಶರಣರ ಬಳಗದಿಂದ ‘ವಚನ ಶ್ರಾವಣ’ ಅಂಗವಾಗಿ ’ವಚನದರ್ಶನ’ ಪ್ರವಚನ ಕಾರ್ಯಕ್ರಮ ಜರುಗಿತು
ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಅನುಭವ ಮಂಟಪದಲ್ಲಿ ಬಸವ ತತ್ವ ಲಿಂಗಾನುಭಾವಿ ಶರಣರ ಬಳಗದಿಂದ ‘ವಚನ ಶ್ರಾವಣ’ ಅಂಗವಾಗಿ ’ವಚನದರ್ಶನ’ ಪ್ರವಚನ ಕಾರ್ಯಕ್ರಮ ಜರುಗಿತು   

ಕಲಘಟಗಿ: ’ಬಸವಾದಿ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶರಣರ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ’ ಎಂದು ಹೊಸದುರ್ಗದ ಬಸವಾಶ್ರಮದ ಅಕ್ಕಮಹಾದೇವಿ ಮಾತಾಜಿ ತಿಳಿಸಿದರು.

ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಅನುಭವ ಮಂಟಪದಲ್ಲಿ ಬಸವ ತತ್ವ ಲಿಂಗಾನುಭಾವಿ ಶರಣರ ಬಳಗದಿಂದ ’ವಚನ ಶ್ರಾವಣ’ ಅಂಗವಾಗಿ ನಡೆದ ’ವಚನದರ್ಶನ’ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರು ಕೊಟ್ಟ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳು ನಮ್ಮ ಜೀವನಕ್ಕೆ ಭದ್ರ ಬುನಾದಿಗಳಾಗಬೇಕು ಎಂದು ಪ್ರವಚನ ಮೂಲಕ ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯಲ್ಲಪ್ಪ ದಾಸನಕೊಪ್ಪ ಹಾಗೂ ಕುಟುಂಬ ವರ್ಗದವರು ವಚನ ಶ್ರಾವಣದ ಅಂಗವಾಗಿ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಿದ್ದರು. ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಶರಣ ಶರಣೆಯರು ಮಹಿಳಾ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.