ADVERTISEMENT

ಕಲಘಟಗಿ: ಜಂತು ಹುಳು ನಿರ್ಮೂಲನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 4:59 IST
Last Updated 12 ಆಗಸ್ಟ್ 2022, 4:59 IST
ತಾಲ್ಲೂಕ ಆರೋಗ್ಯಧಿಕಾರಿ ಎನ್.ಬಿ. ಕರ್ಲವಾಡ ಜಂತು ಹುಳು ನಿವಾರಣೆ ಮಾತ್ರೆ ಮಕ್ಕಳಿಗೆ ಹಾಕಿದರು
ತಾಲ್ಲೂಕ ಆರೋಗ್ಯಧಿಕಾರಿ ಎನ್.ಬಿ. ಕರ್ಲವಾಡ ಜಂತು ಹುಳು ನಿವಾರಣೆ ಮಾತ್ರೆ ಮಕ್ಕಳಿಗೆ ಹಾಕಿದರು   

ಕಲಘಟಗಿ: ಅಪೌಷ್ಟಿಕತೆ ಹಾಗೂ ಜಂತು ಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಿಸುವುದು ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಹೇಳಿದರು.

ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ಸಂತ ಕ್ಸೇವಿಯರ್ಸ್ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ಆಯೋಜಿಸಿದ್ದ ತಾಲ್ಲೂಕ ಮಟ್ಟದ ರಾಷ್ಟ್ರೀಯ ಜಂತು ಹುಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಆರೋಗ್ಯಧಿಕಾರಿ ಎನ್.ಬಿ. ಕರ್ಲವಾಡ ಮಾತನಾಡಿ, ಮಕ್ಕಳು ಸೇವಿಸುವ ಆಹಾರದಲ್ಲಿ ಪೌಷ್ಟಿಕತೆ ಕೊರತೆ ಒಂದೆಡೆಯಾದರೆ, ಮಕ್ಕಳ ದೇಹದಲ್ಲಿ ಜಂತು ಹುಳುಗಳು ಆಹಾರ ಕಬಳಿಸಿ ಮಕ್ಕಳನ್ನ ಅನಾರೋಗ್ಯಕ್ಕೆ ಸಿಲುಕಿಸುತ್ತವೆ ಎಂದರು.

ಡಾ. ಸತ್ಯನಾರಾಯಣ ಮಾತನಾಡಿ, ಮಕ್ಕಳಿಗೆ ಜಂತು ಹುಳು ನಿವಾರಣೆಗಾಗಿ ಆಗಸ್ಟ್ ತಿಂಗಳಲ್ಲಿ ಮಾತ್ರೆ ಉಚಿತವಾಗಿ ನೀಡಲಾಗುತ್ತದೆ ಎಂದರು. ಎನ್.ಎ. ಹೊಂಗಲ, ಕುಮಾರ್ ಕೆ.ಎಫ್, ಎಂ.ಆರ್ ಕುಲಕರ್ಣಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.