ADVERTISEMENT

ಅಳ್ನಾವರ: ರಂಗಿನಾಟದ ಸೊಬಗು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 4:54 IST
Last Updated 8 ಮಾರ್ಚ್ 2023, 4:54 IST
ಅಳ್ನಾವರದಲ್ಲಿ ಮಹಿಳೆಯರು, ಮಕ್ಕಳು ಬಣ್ಣ ಎರಚಿ ಹೋಳಿ ಆಚರಿಸಿದರು
ಅಳ್ನಾವರದಲ್ಲಿ ಮಹಿಳೆಯರು, ಮಕ್ಕಳು ಬಣ್ಣ ಎರಚಿ ಹೋಳಿ ಆಚರಿಸಿದರು   

ಅಳ್ನಾವರ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಭ್ರಮದಿಂದ ಹೋಳಿ ಆಚರಿಸಲಾಯಿತು.

ಪಟ್ಟಣದ ವಿವಿಧ ಕೂಟಗಳಲ್ಲಿ ಕಾಮ ದಹನ ನಡೆಯಿತು. ಕೈಯಲ್ಲಿ ಬಣ್ಣದ ಪೊಟ್ಟಣ ಹಿಡಿದುಕೊಂಡು ಬೆಳಿಗ್ಗೆಯಿಂದಲೇ ಚಿಣ್ಣರು, ಯುವಕರು ಬೀದಿಗಿಳಿದು ತಮಗೆ ಪರಿಚಯಸ್ಥರ ಮನಯತ್ತ ತೆರಳಿ ಬಣ್ಣ ಹಾಕಿ ಸಂಭ್ರಮಿಸಿದರು. ಯುವಕರು ಬೈಕ್‌ನಲ್ಲಿ ಪಟ್ಟಣದಲ್ಲಿ ಸುತ್ತಾಡಿ ಬಣ್ಣ ಎರಚಿಸಿದರು. ಯುವಕರು, ಮಹಿಳೆಯರು ಡಿ.ಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಕಾಮದಹನ ಮಾಡಿದ ಬೆಂಕಿಯಲ್ಲಿ ಕಡ್ಲೆ ಹುರಿದು ತಿಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT