ADVERTISEMENT

ಹುಬ್ಬಳ್ಳಿ: ಡಾ.ಬಿ.ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 5:03 IST
Last Updated 15 ಏಪ್ರಿಲ್ 2022, 5:03 IST
ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಮಹೇಶ ಪತ್ತಾರ, ಗಂಗನಗೌಡ ಪಾಟೀಲ, ರಾಜಕಿರಣ ಮೆಣಸಿನಕಾಯಿ, ಗುರುಸಿದ್ದಪ್ಪ ಅಂಬಿಗೇರ, ದುರ್ಗಪ್ಪ ಚಿಕ್ಕತುಂಬಳ, ಬಸವಣ್ಣೆಪ್ಪ ನೀರಲಗಿ, ಮಂಜುನಾಥ ಹುಜರಾತಿ ಇದ್ದಾರೆ
ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಮಹೇಶ ಪತ್ತಾರ, ಗಂಗನಗೌಡ ಪಾಟೀಲ, ರಾಜಕಿರಣ ಮೆಣಸಿನಕಾಯಿ, ಗುರುಸಿದ್ದಪ್ಪ ಅಂಬಿಗೇರ, ದುರ್ಗಪ್ಪ ಚಿಕ್ಕತುಂಬಳ, ಬಸವಣ್ಣೆಪ್ಪ ನೀರಲಗಿ, ಮಂಜುನಾಥ ಹುಜರಾತಿ ಇದ್ದಾರೆ   

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಅದ್ಧೂರಿಯಾಗಿ ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.

ಮುಖ್ಯ ಅಂಚೆ ಕಚೇರಿ ಬಳಿ ಹಾಗೂ ಕಿಮ್ಸ್ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಗೆ ಜನಪ್ರತಿನಿಧಿಗಳು ಹಾಗೂ ಹಲವು ದಲಿತಪರ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ: ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮೇಘರಾಜ ಹಿರೇಮನಿ, ಎಸ್.ಪಿ. ಹುಬಳ್ಕಿಕರ್, ಲಕ್ಷ್ಮಣ ಕುಂದರಗಿ, ಶಂಕರ ಬೋಜಗಾರ, ರಾಜು ಗಾಣದಾಳ, ಗಣೇಶ ದೊಡ್ಡಮನಿ, ಸುರೇಶ ಖಾನಾಪೂರ, ಗಂಗಾಧರ ಪೇರೂರ, ಶಿವಶಂಕರ ಭಂಡಾರಿ ಇದ್ದರು.

ADVERTISEMENT

ಉತ್ತರ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಣ್ಣ ಕೈಗಾರಿಕಾ ಉದ್ದಿಮೆದಾರರ ಸಂಘದ ಆವರಣದಲ್ಲಿರುವ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪದಾಧಿಕಾರಿಗಳಾದ ಗಣಪತಿ ಸ್ವಾದಿ, ದಿಗಂಬರ ವಾಟಕರ, ಲಿಂಗಪ್ಪ ಒಡೆಯರಹಳ್ಳಿ, ಚಂದ್ರಶೇಖರ ಹುಲ್ಕಂದ, ರಾಮಕೃಷ್ಣದಾಸ ಅಬ್ಬಿಗೇರಿ, ಮಾರುತಿ ಭಜಂತ್ರಿ, ಶಿವಾನಂದ ದಡವಾಡ, ಬಸವರಾಜ ಗುತ್ತಲ, ಮೋಹನ ಭರಮಕ್ಕನವರ, ಸುರೇಶಗೌಡ ಪಾಟೀಲ ಇದ್ದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂಬೇಡ್ಕರ್ ಹಾಗೂ ಮಹಾವೀರ ಜಯಂತಿ ಆಚರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ಮಾತನಾಡಿದರು.

ಕೇಂದ್ರ ಕಚೇರಿಯ ಇಲಾಖೆ ಮುಖ್ಯಸ್ಥ ರಾಜೇಶ ಹುದ್ದಾರ, ಬಸಲಿಂಗಪ್ಪ ಬೀಡಿ, ಶಶಿಧರ ಕುಂಬಾರ, ಪ್ರಕಾಶ ಕರಗುದರಿ, ದಶರಥ ಕೆಳಗೇರಿ, ಕೃಷ್ಣಾನಂದ ಭಟ್ಟ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಅರುಣ ಮುಶನ್ನವರ, ಆರ್.ಎಫ್. ಕವಳಿಕಾಯಿ, ಸತೀಶ ಹಾಳಕೇರಿ, ಗಂಗಾಧರ ಕಮಲದಿನ್ನಿ, ವಿರೂಪಾಕ್ಷ ಕಟ್ಟಿಮನಿ ಇದ್ದರು.

ಜ್ಯೋತಿ ಸಣ್ಣಕ್ಕಿಗೆ ಸನ್ಮಾನ: ಅಂಗವಿಕಲರ ಮಹಿಳಾ ವಿಭಾಗದ 10 ಮೀಟರ್‌ ಏರ್‌ಶೂಟ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಜ್ಯೋತಿ ಸಣ್ಣಕ್ಕಿ ಅವರನ್ನು ಸಮಗಾರ ಹರಳಯ್ಯ ಹಿತಾಭಿವೃದ್ಧಿ ಸಂಘದಿಂದ ಸನ್ಮಾನಿಸಲಾಯಿತು.

ಮುಖಂಡ ಲಕ್ಷ್ಮಣ ಗಂಡಗಾಳೇಕರ,ಬಸವರಾಜ ತೆರದಾಳ, ಉಪಾಧ್ಯಕ್ಷ ಪರಶುರಾಮ್‌ ಉಳ್ಳಿಕಾಶಿ, ಚಂದ್ರಶೇಖರ ಖಾನಪೇಟ, ಬಸವರಾಜ ಕಾಂಬ್ಳೆ, ನಾಗರಾಜ್ ಉಳ್ಳಿಕಾಶಿ, ‍ಪ್ರಕಾಶ ಹಿರೇಮನಿ ಇದ್ದರು.

ರಾರಾಜಿಸಿದ ನೀಲಿ ಬಾವುಟ: ನಗರದ ಬಸ್ ನಿಲ್ದಾಣ, ಬೈಕ್‌, ಆಟೊ ಮತ್ತು ಕಾರ್‌ ಸೇರಿದಂತೆ ವಿವಿಧ ಓಣಿಗಳಲ್ಲೂ ಅಂಬೇಡ್ಕರ್‌ ಭಾವಚಿತ್ರವಿದ್ದ ನೀಲಿ ಬಾವುಟ ರಾರಾಜಿಸಿತು. ಯುವಕರು ಬೈಕ್‌ ರ್‍ಯಾಲಿ ನಡೆಸಿ, ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.