ADVERTISEMENT

ಅಳ್ನಾವರ: ಕುಸಿದ ಅಂಗನವಾಡಿ ಕಟ್ಟಡ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 4:28 IST
Last Updated 22 ಜುಲೈ 2022, 4:28 IST
ಕುಸಿದಿರುವ ಅಳ್ನಾವರ ತಾಲ್ಲೂಕಿನ ಶಿವನಗರ ಗೌಳಿ ದಡ್ಡಿಯ ಅಂಗನವಾಡಿ ಕಟ್ಟಡ
ಕುಸಿದಿರುವ ಅಳ್ನಾವರ ತಾಲ್ಲೂಕಿನ ಶಿವನಗರ ಗೌಳಿ ದಡ್ಡಿಯ ಅಂಗನವಾಡಿ ಕಟ್ಟಡ   

ಅಳ್ನಾವರ: ಹಲವು ದಿನಗಳ ಕಾಲ ಮಳೆ ಸುರಿದ ಪರಿಣಾಮ ಶಿಥಿಲಗೊಂಡಿದ್ದ ಅರವಟಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌಳಿಗರು ವಾಸವಿರುವ ಶಿವನಗರದ ಅಂಗನವಾಡಿ ಕಟ್ಟಡ ಗುರುವಾರ ಬೆಳಗಿನ ಜಾವ ಕುಸಿದಿದೆ.

ಇಲ್ಲಿ 30 ಮಕ್ಕಳು ಕಳಿಯುತ್ತಿದ್ದಾರೆ. ಮಕ್ಕಳು ಇಲ್ಲದ ಸಮಯದಲ್ಲಿ ಕಟ್ಟಡ ಕುಸಿದಿರುವುದರಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರಾದ ಪ್ರದೀಪ ಗಾವಡೆ ತಿಳಿಸಿದ್ದಾರೆ.

ಬಿದ್ದ ಮನೆ: ಜೂನ್ ತಿಂಗಳಲ್ಲಿ ಮಳೆ ಸುರಿದ ಪರಿಣಾಮ ತಾಲ್ಲೂಕ ವ್ಯಾಪ್ತಿಯಲ್ಲಿ 20 ಮನೆಗಳು ಬಿದ್ದಿವೆ. ಅದರಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ 16 ಮನೆಗಳಿಗೆ ಪರಿಹಾರ ನೀಡಲಾಗಿದೆ. ಜುಲೈ ತಿಂಗಳಲ್ಲಿ 18 ಮನೆಗಳು ಬಿದ್ದಿವೆ. ಅದರ ದಾಖಲೀಕರಣ ಕಾರ್ಯ ನಡೆದಿದೆ ಎಂದು ತಹಶೀಲ್ದಾರ್ ಕಚೇರಿಯ ಶೀರಸ್ತೇದಾರ್ ಎಂ.ಜಿ. ಪತ್ತಾರ ಮಾಹಿತಿ ನೀಡಿದ್ದಾರೆ.

ADVERTISEMENT

ಸಮೀಕ್ಷಾ ತಂಡ: ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯ್ತಿಗಳಲ್ಲಿ ಅತಿವೃಷ್ಟಿಗೆ ಬಿದ್ದ ಮನೆಗಳನ್ನು ಸಮೀಕ್ಷೆ ಮಾಡಲು ತಂಡ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.