ADVERTISEMENT

ಅನುಕೂಲಕರ ಸ್ಥಳದಲ್ಲಿ ಪ್ರಜಾಸೌಧ ನಿರ್ಮಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:27 IST
Last Updated 18 ಜೂನ್ 2025, 15:27 IST
ಅಳ್ನಾವರ ತಾಲ್ಲೂಕಿನ ಜನತೆಗೆ ಅನುಕೂಲಕರ ಜಾಗದಲ್ಲಿ ಪ್ರಜಾಸೌಧ ನಿರ್ಮಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ನಿಯೋಗ ಮನವಿ ಸಲ್ಲಿಸಿತು
ಅಳ್ನಾವರ ತಾಲ್ಲೂಕಿನ ಜನತೆಗೆ ಅನುಕೂಲಕರ ಜಾಗದಲ್ಲಿ ಪ್ರಜಾಸೌಧ ನಿರ್ಮಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ನಿಯೋಗ ಮನವಿ ಸಲ್ಲಿಸಿತು   

ಅಳ್ನಾವರ: ‘ಹೊಸ ತಾಲ್ಲೂಕಿನ ಉದ್ದೇಶಿತ ಪ್ರಜಾಸೌಧ ಕಟ್ಟಡದ ಜಾಗವು ಪಟ್ಟಣದಿಂದ ದೂರದಲ್ಲಿದೆ. ಸಾರ್ವಜನಿಕರಿಗೆ ಹೋಗಿ ಬರಲು ಅನುಕೂಲವಿಲ್ಲ. ಪಟ್ಟಣದ ಮಧ್ಯ ಭಾಗದ ಸೂಕ್ತ ಜಾಗ ಗುರುತಿಸಿ ಕಟ್ಟಡ ಕಟ್ಟಬೇಕು’ ಎಂದು ತಾಲ್ಲೂಕಿನ ಸಾರ್ವಜನಿಕರ ನಿಯೋಗ ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿತು.

‘ನಿಗದಿತ ಜಾಗವು ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿದೆ ಮತ್ತು ಅಳ್ನಾವರ ತಾಲ್ಲೂಕಿನ ಜನರು ಹೋಗಿ ಬರಲು ತೊಂದರೆ ಆಗಲಿದೆ. ಪ್ರಜಾಸೌಧ ಕಟ್ಟಡ ನಿರ್ಮಿಸುವ ಜಾಗದ ಪಕ್ಕದಲ್ಲಿ ಸ್ಮಶಾನವಿದೆ ಹಾಗೂ ಇಲ್ಲಿಗೆ ಹೋಗಿ ಬರಲು ಒಂದೇ ರಸ್ತೆಯಿದೆ. ಮಳೆಗಾಲದಲ್ಲಿ ಇದರಿಂದಲೂ ತೊಂದರೆಯಾಗಲಿದೆ. ಈ ಎಲ್ಲ ಕಾರಣಗಳಿಂದ ಪಟ್ಟಣಕ್ಕೆ ಹೊಂದಿಕೊಂಡಿದ್ದರೆ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ’ ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ಪ್ರಭಾರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರಿಗೆ ಮನವಿ ಸಲ್ಲಿಸಲಾಯಿತು. ಲಖನ ಬರಗುಂಡಿ, ಶಿವಾಜಿ ಡೊಳ್ಳಿನ, ಭರತೇಶ ಪಾಟೀಲ, ಮಲ್ಲಪ್ಪ ಗಾಣಿಗೇರ, ಸಂದೀಪ ಪಾಟೀಲ, ಪರಶುರಾಮ ಪಾಲಕರ, ಪ್ರಕಾಶ ಗಾಣಿಗೇರ, ಯಲ್ಲಾರಿ ಹುಬ್ಬಳ್ಳಿಕರ, ಪರಶುರಾಮ ಕಾಕತ್ಕರ, ನಾಗರಾಜ ಬುಡರಕಟ್ಟಿ, ಮಲ್ಲನಗೌಡ ಪಾಟೀಲ, ಪ್ರವೀಣ ಪವಾರ, ಸತೀಶ ಹಿರೇಮಠ, ಪರಶುರಾಮ ರೇಡೆಕರ, ಕಲ್ಮೇಶ ಚಚಡಿ, ಸೋಮಶೇಖರ ಇದ್ದರು.

ADVERTISEMENT

ನಂತರ ನಿಯೋಗವು ಸಂಸದ ಪ್ರಲ್ಹಾದ ಜೋಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ, ಹಾಗೂ ಉಪವಿಭಾಗಾಧಿಕಾರಿಗೂ ಮನವಿ ಸಲ್ಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.