ADVERTISEMENT

ಕಲಘಟಗಿ: ನೆರವಿನ ನಿರೀಕ್ಷೆಯಲ್ಲಿ ಕ್ರೀಡಾಪಟು ದೇವಪ್ಪ ಮೋರೆ

ಜರ್ಮನಿಯಲ್ಲಿ ವಿಶ್ವ ಕುಬ್ಜರ ಅಥ್ಲೆಟಿಕ್ ಕ್ರೀಡಾಕೂಟ

ಪ್ರಜಾವಾಣಿ ವಿಶೇಷ
Published 19 ಜುಲೈ 2023, 5:45 IST
Last Updated 19 ಜುಲೈ 2023, 5:45 IST
ಅಂತರಾಷ್ಟ್ರೀಯ ಕ್ರೀಡಾಪಟು ದೇವಪ್ಪ ಮೋರೆ
ಅಂತರಾಷ್ಟ್ರೀಯ ಕ್ರೀಡಾಪಟು ದೇವಪ್ಪ ಮೋರೆ   

ಕಲ್ಲಪ್ಪ ಮ. ಮಿರ್ಜಿ

ಕಲಘಟಗಿ: ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ದೇವಪ್ಪ ಮೋರೆ ಅವರು ಜರ್ಮನಿಯಲ್ಲಿ ಜುಲೈ 28ರಂದು ನಡೆಯುವ ವಿಶ್ವ ಕುಬ್ಜರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಜುಲೈ 25ರಂದು ಅವರು ಪ್ರಯಾಣ ಬೆಳೆಸುವರು.

ಪ್ರೌಢಶಾಲೆಯ ದಿನಗಳಿಂದಲೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ದೇವಪ್ಪ ಅವರು ಈಗ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟು. 20 ವರ್ಷಗಳಿಂದ ಅವರು ವಿವಿಧ ದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. ಬಹುತೇಕ ಕಡೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಜೊತೆ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ.

ADVERTISEMENT

60 ಮೀಟರ್, 100 ಮೀಟರ್, 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವೆ. ಐರ್ಲೆಂಡ್, ದುಬೈ, ಅಮೆರಿಕ, ಕೆನಡಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ, ಬಹುಮಾನ ಗಳಿಸಿರುವೆ. ಈಗ ಜರ್ಮನಿಗೆ ಸರ್ಕಾರದಿಂದ ಹೆಚ್ಚಿನ ನೆರವು ಬೇಕಿದೆ’ ಎಂದು ದೇವಪ್ಪ ಮೋರೆ ತಿಳಿಸಿದರು.

‘ನಮ್ಮ ರಾಜ್ಯದಿಂದ 8 ಮಂದಿ ಜರ್ಮನಿಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವರು. ಆರ್ಥಿಕ ನೆರವು ನೀಡಲು ಕೋರಿ ಈಗಾಗಲೇ ರಾಜ್ಯಪಾಲ ಥಾವರಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಕ್ರೀಡಾಕೂಟದಲ್ಲಿ ಭಾಗವಹಿಸಲು ₹ 2.50 ಲಕ್ಷ ಪಾವತಿಸಬೇಕು. ಈಗ ₹ 1.50 ಲಕ್ಷದವರೆಗೆ ಸಾಲ ಮಾಡಿ, ಪಾವತಿಸಿರುವೆ. ಬೇರೆ ಕಡೆಗಳಲ್ಲೂ ಸಾಲಕ್ಕಾಗಿ ಪ್ರಯತ್ನಿಸುತ್ತಿರುವೆ. ಆರ್ಥಿಕ ನೆರವಿನ ಅಗತ್ಯವಿದೆ’ ಎಂದರು.

‘ಕುಬ್ಜರ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿರುವ ದೇವಪ್ಪ ಮೋರೆ ಅವರಿಗೆ ವಿವಿಧ ಸಂಘಸಂಸ್ಥೆಗಳು ಅಲ್ಲದೇ ಸರ್ಕಾರ ಕೂಡ ನೆರವಿಗೆ ಬರಬೇಕು’ ಎಂದು ಕ್ರೀಡಾ ತರಬೇತುದಾರ ಶಿವಾನಂದ ಗುಂಜಾಳ ತಿಳಿಸಿದರು.

ಅಂತರಾಷ್ಟ್ರೀಯ ಕ್ರೀಡಾಪಟು ದೇವಪ್ಪ ಮೋರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.