ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನೀಡುವ ‘ಭಾವೈಕ್ಯತಾ ಮೂರ್ತಿ’ ಗೌರವ ಪ್ರಶಸ್ತಿಗೆ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗೆ ಆಯ್ಕೆಯಾಗಿದ್ದಾರೆ.
‘ಚುಟುಕು ಚಿನ್ಮಯಿ’ ಪ್ರಶಸ್ತಿಗೆ ಹನುಮಾಕ್ಷಿ ಗೋಗಿ, ‘ಜಯಶ್ರೀ ಸಮ್ಮಾನ’ಕ್ಕೆ ಕವಯತ್ರಿ ಮಂಜುಳಾ ಕುಲಕರ್ಣಿ, ‘ವಿಶಾಲಾಕ್ಷಿ ಗೌರವ ಪ್ರಶಸ್ತಿ’ಗೆ ಬರಹಗಾರ್ತಿ ಪ್ರಭಾವತಿ ಮುತ್ತಿನ ಅವರನ್ನು ಆಯ್ಕೆ ಮಾಡಲಾಗಿದೆ.
ಜುಲೈ 27ರಂದು ಬೆಳಿಗ್ಗೆ 10.30ಕ್ಕೆ ಮೂರುಸಾವಿರ ಮಠದ ಮೂಜಗಂ ಸಭಾಂಗಣದಲ್ಲಿ ನಡೆಯುವ ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಲೇಖಕಿಯರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಿಕ್ಷಣ ತಜ್ಞ ಆರ್.ಎಂ.ಕುಬೇರಪ್ಪ ಸಮ್ಮೇಳನ ಉದ್ಘಾಟಿಸುವರು. ಮಾಜಿ ಸಂಸದ ಐ.ಜಿ.ಸನದಿ, ಡಾ.ರಮೇಶ ಮಹಾದೇವಪ್ಪ ಪಾಲ್ಗೊಳ್ಳುವರು ಎಂದು ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.