ADVERTISEMENT

ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ 31ನೇ ಮಹಾಪರಿನಿರ್ವಾಣ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 14:59 IST
Last Updated 27 ಡಿಸೆಂಬರ್ 2022, 14:59 IST
ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ 31ನೇ ಮಹಾ ಪರಿನಿರ್ವಾಣದ ಅಂಗವಾಗಿ, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಬಸವಲಿಂಗಪ್ಪ ಅವರ ಮೂರ್ತಿ ಬಳಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು
ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ 31ನೇ ಮಹಾ ಪರಿನಿರ್ವಾಣದ ಅಂಗವಾಗಿ, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಬಸವಲಿಂಗಪ್ಪ ಅವರ ಮೂರ್ತಿ ಬಳಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು   

ಹುಬ್ಬಳ್ಳಿ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ರಾಜಕಾರಣ ಮಾಡಿದ ಬಿ. ಬಸವಲಿಂಗಪ್ಪ ಅವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ರಾಜ್ಯಕ್ಕೆ ಅವರ ಕೊಡುಗೆ ಅಪಾರ’ ಎಂದುಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ಹೇಳಿದರು.

ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ 31ನೇ ಮಹಾಪರಿನಿರ್ವಾಣದ ಅಂಗವಾಗಿ, ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಬಸಲಿಂಗಪ್ಪ ಅವರ ಮೂರ್ತಿ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಲ ಹೊರುವ ಪದ್ಧತಿ ನಿಷೇಧಿಸುವ ಕಾನೂನನ್ನು ಜಾರಿಗೆ ತಂದ ಬಸವಲಿಂಗಪ್ಪ ಅವರು, ದಲಿತರಿಗೆ ಮಂಜೂರಾದ ಜಮೀನು ಪರಭಾರೆಯಾಗದಂತೆ ಕಾನೂನು ರೂಪಿಸಿದರು’ ಎಂದರು.

‘ಬಸವಲಿಂಗಪ್ಪ ಅವರು ಕಂದಾಯ ಮಂತ್ರಿಯಾಗಿದ್ದಾಗಲೇ, ಎಲ್ಲಾ ಜಾತಿಗಳ ಬಡವರಿಗೂ ನೆರವಾದ ಉಳುವವನಿಗೇ ಭೂಮಿ ಆಶಯದ ಕಾನೂನು ಜಾರಿಯಾಯಿತು. ರಾಜಕಾರಣವಷ್ಟೇ ಅಲ್ಲದೆವೈಚಾರಿಕ ಲೋಕ ಮತ್ತು ದಲಿತ ಚಳುವಳಿಗೂ ಅವರ ಕೊಡುಗೆ ಮಹತ್ತರವಾದದು. ನೇರ ನುಡಿಯ ಅವರು ಎಂದಿಗೂ ಹೊಂದಾಣಿಕೆಯ ರಾಜಕಾರಣ ಮಾಡಿದವರಲ್ಲ’ ಎಂದು ನೆನೆದರು.

ADVERTISEMENT

ಮೂರ್ತಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ದಲಿತ ಮುಖಂಡರಾದ ಗಂಗಾಧರ ಕಮಲದಿನ್ನಿ, ಶಂಕರ ಅಜಮನಿ, ಪ್ರೊ. ಕೆ.ಜಿ. ಆಡೂರು, ಹನುಮಂತಪ್ಪ ದಂಡಂಬಳ್ಳಿ, ಸಿದ್ಧಪ್ಪ ಸಕ್ರೆಪ್ಪನವರ, ಎಂ.ಎ. ಹುಂಡೇಕರ, ಧಾರವಾಡದ ಬುದ್ಧರಕ್ಕಿತ ವಸತಿ ಪ್ರೌಢಶಾಲೆ, ಅಶೋಕ ಸಾಮ್ರಾಟ ಪದವಿಪೂರ್ವ ಕಾಲೇಜು ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿಗಳು ಇದ್ದರು.

ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಅವರು ಇಂದಿರಾ ಗಾಜಿನ ಮನೆಗೆ ಭೇಟಿ ನೀಡಿ, ಬಸವಲಿಂಗಪ್ಪ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌.ಸಿ. ಬೇವೂರ, ಪಾಲಿಕೆಯ ವಿರೋಧ ಪಕ್ಷದ ನಾಯಕ ದೊರೈರಾಜ್ ಮಣಿಕುಂಟ್ಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.