ADVERTISEMENT

ಕಲಘಟಗಿ: ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್‌ಬುಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:28 IST
Last Updated 4 ಜುಲೈ 2025, 15:28 IST
ಕಲಘಟಗಿ ಮಡಕಿಹೊನ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಮಕ್ಕಳ ಹಿತರಕ್ಷಣಾ ಸಮಿತಿಯಿಂದ ಸ್ಕೂಲ್ ಬ್ಯಾಗ್ ಹಾಗೂ ನೋಟ್‌ಬುಕ್‌ ವಿತರಿಸಲಾಯಿತು
ಕಲಘಟಗಿ ಮಡಕಿಹೊನ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಮಕ್ಕಳ ಹಿತರಕ್ಷಣಾ ಸಮಿತಿಯಿಂದ ಸ್ಕೂಲ್ ಬ್ಯಾಗ್ ಹಾಗೂ ನೋಟ್‌ಬುಕ್‌ ವಿತರಿಸಲಾಯಿತು   

ಕಲಘಟಗಿ: ‘ಬಡ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಸ್ಕೂಲ್ ಬ್ಯಾಗ್‌ ಹಾಗೂ ನೋಟ್‌ಬುಕ್‌, ಪೆನ್ನು ವಿತರಿಸಲಾಗುತ್ತಿದೆ‘ ಎಂದು ರಾಜ್ಯ ಮಕ್ಕಳ ಹಿತರಕ್ಷಣಾ ಸಮಿತಿ ರಾಜ್ಯಧ್ಯಕ್ಷ ಉದಯ ಗೌಡರ ಹೇಳಿದರು.

ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಮಕ್ಕಳ ಹಿತರಕ್ಷಣಾ ಸಮಿತಿಯಿಂದ ಸ್ಕೂಲ್ ಬ್ಯಾಗ್ ಹಾಗೂ ನೋಟ್‌ಬುಕ್‌ ವಿತರಿಸಿ, ಮಾತನಾಡಿದರು.

‘ಸಮಿತಿಯು ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ರಕ್ಷಣೆ ಹಾಗೂ ಸಹಾಯಕ್ಕೆ ನಾವು ಸಿದ್ದರಿದ್ದೇವೆ‘ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಸೋಲಾರಗೋಪ್ಪ ಮಾತನಾಡಿದರು.

ಸಮಿತಿಯ ಸದಸ್ಯರಾದ ವಿಜಯಲಕ್ಷ್ಮಿ ಹರಮಣ್ಣವರ, ಅನ್ನಪೂರ್ಣ ಹರಮಣ್ಣವರ,ಕಿರಣ ಗೌಡರ, ಶಾಲೆ ಮುಖ್ಯ ಶಿಕ್ಷಕ ಯು.ಎಸ್. ಹೆಬ್ಬಳ್ಳಿ, ಎಸ್.ಡಿ.ಎಂಸಿ ಅಧ್ಯಕ್ಷ ಬಸವರಾಜ ಬಂಡಿ, ಗ್ರಾ.ಪಂ ಸದಸ್ಯ ಬಸವರಾಜ ಪರವಾಪುರ, ಶಿಕ್ಷಕರಾದ ಪಿ.ಬಿ.ಮಿರ್ಜಿ, ಕೆ.ಜಿ ಕಾಪ್ರೆ, ಎನ್.ಎಂ.ಬಳಿಗಾರ, ಎಂ.ಎಫ್.ನವಲೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.