ಧಾರವಾಡ: ಬೆಂಗಳೂರಿನ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೊರಿಯಲ್ ಫೌಂಡೇಷನ್ ಟ್ರಸ್ಟ್ ನೀಡುವ ‘ಇನ್ಫೋಸಿಸ್ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೊರಿಯಲ್ ಪ್ರಶಸ್ತಿ’ಗೆ ಹಿಂದೂಸ್ತಾನಿ ಗಾಯಕ ಸೋಮನಾಥ ಮರಡೂರ ಹಾಗೂ ‘ಉಸ್ತಾದ್ ಬಾಲೇಖಾನ್ ಮೆಮೊರಿಯಲ್ ಸಹಕಲಾವಿದ ಪ್ರಶಸ್ತಿ’ಗೆ ತಬಲಾ ವಾದಕ ಪುಣೆಯ ಮುಖೇಶ ಶ್ರೀಪತರಾವ್ ಜಾಧವ ಆಯ್ಕೆಯಾಗಿದ್ದಾರೆ.
ಉಸ್ತಾದ್ ಬಾಲೇಖಾನ್ ಪ್ರಶಸ್ತಿಯು ₹1 ಲಕ್ಷ ಹಾಗೂ ಸಹಕಲಾವಿದ ಪುರಸ್ಕಾರವು ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ. ಸೆಪ್ಪೆಂಬರ್ 14ರಂದು ಸೃಜನಾ ರಂಗಮಂದಿರದಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಫೀಜ್ ಬಾಲೇಖಾನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.